Header Ads
Breaking News

ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯ ಪ್ರಥಮ ಸಭೆ ಗದ್ದಲ : ಕಾಂಗ್ರೆಸ್ ಸದಸ್ಯರ ಸಭಾತ್ಯಾಗ

ಮಂಗಳೂರು ಮಹಾನಗರ ಪಾಲಿಕೆ ವಿಪಕ್ಷ ನಾಯಕನ ಆಯ್ಕೆಗೆ ಮಾನ್ಯತೆ ನೀಡುವ ಕುರಿತಂತೆ ಆಡಳಿತ – ವಿಪಕ್ಷ ನಡುವೆ ವಾಗ್ವಾದಕ್ಕೆ ಕಾರಣವಾಯ್ತು. ಇನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯ ಪ್ರಥಮ ಸಭೆಯಲ್ಲೇ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯ ಪ್ರಥಮ ಸಭೆ ಗದ್ದಲಕ್ಕೆ ಕಾರಣವಾಯ್ತು. ಸಭೆಯ ಆರಂಭದಲ್ಲಿ ನೂತನ ಮೇಯರ್ ಪ್ರೇಮಾನಂದ ಶೆಟ್ಟಿಯವರು ವಿಪಕ್ಷ ನಾಯಕರನ್ನು ಯಾಕೆ ಸ್ವಾಗತಿಸಿಲ್ಲ ಎಂದು ಮಾಜಿ ವಿಪಕ್ಷ ನಾಯಕ ಅಬ್ದುಲ್ ರವೂಫ್ ಪ್ರಶ್ನಿಸಿದರು.
ಕಾಂಗ್ರೆಸ್‍ನಿಂದ ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡಿರುವುದನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನೇರವಾಗಿ ಪಾಲಿಕೆ ಆಯುಕ್ತರಿಗೆ ಪತ್ರ ಮೂಲಕ ತಿಳಿಸಿ ಮಾನ್ಯತೆ ನೀಡುವಂತೆ ಕೋರಿರುವ ಮೂಲಕ ಹಿಂದಿನ ಸಂಪ್ರದಾಯವನ್ನು ಮುರಿಯಲಾಗಿದೆ. ಈ ಬಗ್ಗೆ ಕಾನೂನು ತಜ್ಞರ ಸಲಹೆ ಕೋರಲಾಗಿರುವಂತೆ ಮಾನ್ಯತೆ ನೀಡಲು ಬರುವುದಿಲ್ಲ ಎಂದು ನ್ಯಾಯವಾದಿ ತಿಳಿಸಿರುವ ಕಾರಣ ವಿಷಯ ಕಡತ ರೂಪದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯಿಸಿದರು.
ಈ ಸಂದರ್ಭ ಪಾಲಿಕೆ ಸದಸ್ಯರಾದ ಅಬ್ದುಲ್ ರವೂಫ್ ಹಾಗೂ ಶಶಿಧರ ಹೆಗ್ಡೆಯವರು ಪ್ರತಿಕ್ರಿಯಿಸಿ, 1984ರಿಂದ ಮನಪಾ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಆಡಳಿತ ಪಕ್ಷವು ವಿಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸುತ್ತಿದೆ. ಹಾಗಾಗಿ ಈ ವಿಚಾರದಲ್ಲೂ ಕಾನೂನಿಗಿಂತ ಮಿಗಿಲಾಗಿ ಮೌಲ್ಯಕ್ಕೆ ಅವಕಾಶ ನೀಡಿ ಎಂದು ಅವ್ರು ಹೇಳಿದ್ರು.
ಈ ಸಂದರ್ಭ ವಿನಯ್ ರಾಜ್‍ರವರು ಪ್ರತಿಕ್ರಿಯಿಸಿ, ಸದನದ ಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ. ಆಯುಕ್ತರಿಂದಲೂ ಅನುಮತಿ ಕೋರಲಾಗಿದೆ. ವೈಯಕ್ತಿಕ ನೆಲೆಯಲ್ಲಿ ನನ್ನ ಮೇಲೆ ರಾಜಕಾರಣ ಮಾಡುವುದು, ತೇಜೋವಧೆ ಮಾಡಿರುವುದು ನೋವಾಗಿದೆ ಎಂದು ಅವ್ರು ಹೇಳಿದರು.

Related posts

Leave a Reply

Your email address will not be published. Required fields are marked *