Header Ads
Header Ads
Breaking News

ಮೇರಿಹಿಲ್‌ನ ವಿಕಾಸ್ ಕಾಲೇಜಿನಲ್ಲಿ “ಅಂತರಾಷ್ಟ್ರೀಯ ಮಾದಕದ್ರವ್ಯ ವ್ಯಸನ” ನಿರ್ಮೂಲನಾ ಕಾರ್ಯಕ್ರಮ

ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಹಾಗೂ ನಿಯಮಬಾಹಿರ ಮಾನವ ಸಾಗಣೆ ನಿರ್ಮೂಲನಾ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರು ಡಿಸಿಪಿ ಹನುಮಂತರಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ’ಮುಂದುವರಿದ ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಮಾದಕದ್ರವ್ಯದ ಸೇವನೆಯು ಇತ್ತೀಚಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಿ ಕಂಡುಬರುತ್ತಿದೆ.

 

ಒಬ್ಬ ವ್ಯಕ್ತಿ, ಸಮಾಜ, ರಾಷ್ಟ್ರ, ಜಗತ್ತು ನಿಸ್ಸಂಶಯವಾಗಿ ಈ ಸಮಸ್ಯೆಯ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾದಕದ್ರವ್ಯ ಸೇವನೆಯ ವಿರುದ್ಧ ಪ್ರಮಾಣವಚನ ಸ್ವೀಕರಿಸಿದರು.ವೇದಿಕೆಯಲ್ಲಿ ವಿಕಾಸ್ ಎಜ್ಯುಕೇಷನ್ ಟ್ರಸ್ಟ್‌ನ ಟ್ರಸ್ಟಿ ಜೆ. ಕೊರಗಪ್ಪ, ವಿಕಾಸ್ ಎಜ್ಯುಸೊಲ್ಯುಶನ್‌ನ ನಿರ್ದೇಶಕರಾದ ಡಾ. ಅನಂತ್ ಪ್ರಭು ಜಿ., ವಿಕಾಸ್ ಸಮೂಹ ಸಂಸ್ಥೆಯ ಸಮನ್ವಯಾಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲರಾದ ಪ್ರೊ ಟಿ. ರಾಜಾರಾಮ್ ರಾವ್ ಸ೦ಚಾಲಕರಾದ ಡಾ. ಡಿ ಶ್ರೀಪತಿ ರಾವ್, ಉಪನ್ಯಾಸಕಿ ಶ್ರುತಿ ಭಂಡಾರಿ ಉಪಸ್ಥಿತರಿದ್ದರು.

Related posts

Leave a Reply