Header Ads
Header Ads
Header Ads
Breaking News

ಮೇಲಾಧಿಕಾರಿಗೆ ಮಾಹಿತಿ ನೀಡದ ಕಾರಣ ಎಸ್‌ಐ, ಇಬ್ಬರು ಹೆಡ್ ಕಾನ್ಸ್ಟೇಬಲ್ ಅಮಾನತು : ಎಸ್ಪಿ ನಿಶಾ ಜೇಮ್ಸ್ ಆದೇಶ

ಮೇಲಧಿಕಾರಿಗೆ ಮಾಹಿತಿ ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಎಸ್‌ಐ ಹಾಗೂ ಇಬ್ಬರು ಹೆಡ್‌ಕಾನ್ಸ್ಟೇಬಲ್‌ಗಳನ್ನ ಅಮಾನತುಗೊಳಿಸಿ ಎಸ್ಪಿ ನಿಶಾ ಜೇಮ್ಸ್ ಆದೇಶಿಸಿದ್ದಾರೆ. ನಗರದ ಅಜ್ಜರಕಾಡಿನಲ್ಲಿರುವ ಭುಜಂಗ ಪಾರ್ಕಿನಲ್ಲಿ ಯುವಕನ ಮೇಲೆ ಒಂದು ಗುಂಪಿನಿಂದ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಹೆಡ್ ಕಾನ್ಸ್ಟೇ ಬಲ್ ಅವರೊಂದಿಗೆ ಸ್ಥಳಕ್ಕಾಗಮಿಸಿದ ನಗರ ಪೊಲೀಸ್ ಠಾಣೆಯ ಎಸ್‌ಐ ಅನಂತಪದ್ಮನಾಭ ಯುವಕನನ್ನ ಹಾಗೂ ಹಲ್ಲೆ ನಡೆಸಿದವರನ್ನ ವಿಚಾರಣೆ ನಡೆಸಿ ಹಲ್ಲೆಗೊಳಗಾದ ಯುವಕ ದೂರು ದಾಖಲಿಸಲು ಒಪ್ಪದಿದ್ದಾಗ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು.

ಇದಾದ ಕೆಲ ದಿನಗಳ ಬಳಿಕ ಹಲ್ಲೆಗೊಳಗಾದ ಯುವಕ ನೇರವಾಗಿ ಎಸ್ಪಿ ಬಳಿ ತೆರಳಿ ಹಲ್ಲೆಯಾಗಿದೆಯೆಂದು ದೂರು ನೀಡಿದ್ದಾನೆ, ಕೂಡಲೇ ಎಫ್ ಐಆರ್ ದಾಖಲಿಸಿದ ಎಸ್ಪಿ ನಿಶಾ ಜೇಮ್ಸ್ ನನಗೆ ಘಟನೆ ನಡೆದ ದಿನ ಹಲ್ಲೆಯ ಮಾಹಿತಿ ಏಕೆ ನೀಡಿಲ್ಲ ಎಂದು ನಗರ ಠಾಣೆಯ ಎಸ್‌ಐ ಅನಂತ ಅವರನ್ನ ಹಾಗೂ ಹೆಡ್ ಕಾನ್ಸ್ಟೇಬಲ್ ಜೀವನ್ ರನ್ನ ಅಮಾನತು ಮಾಡಿದ್ದಾರೆ. ಎಸ್ಪಿ ನಿಶಾ ಅವರ ಈ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ. ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲದ ಎಸ್‌ಐ ಅಮಾನತು ಖಂಡನೀಯ. ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಮಾತನಾಡಿ ಅಮಾನತು ಆದೇಶ ಹಿಂಪಡೆಯಲು ಒತ್ತಾಯಿಸುತ್ತೇನೆ ಎಂದು ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ರು.

Related posts

Leave a Reply

Your email address will not be published. Required fields are marked *