Header Ads
Breaking News

ಮೇ 12ರಂದು ಚಿಲಿಂಬಿಯಲ್ಲಿ ನಡೆಯಲಿದೆ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರ

ಬೀದಿಪಾಲಾಗುವ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿರುವ ಮಂಗಳೂರಿನ ಆನಿಮಲ್ ಕೇರ್ ಟ್ರಸ್ಟ್ ವಿವಿಧ ಸಂಘಸಂಸ್ಥೆಗಳ ಮೂಲಕ ದೇಸೀ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತುಶಿಬಿರವನ್ನು ಹಮ್ಮಿಕೊಂಡು ಬಂದಿದೆ. ಇದೀಗ ಪೈಸೇಲ್ಸ್ ಸುಝುಕಿ ಸಹಯೋಗದಲ್ಲಿ ಮತ್ತೊಂದು ದತ್ತುಕೊಡುವ ಶಿಬಿರವು ಮೇ 12ರಂದು ಮಂಗಳೂರಿನ ಚಿಲಿಂಬಿ ದ್ವಾರದ ಬಳಿಯಿರುವ ಪೈಸೇಲ್ಸ್ ಸುಝುಕಿ ಶೋರೂಂನಲ್ಲಿ ನಡೆಯಲಿದೆ.

ಹೌದು, ಅನೇಕ ಕಾರಣಗಳಿಂದಾಗಿ ಬೀದಿಪಾಲಾಗಿ ಅನ್ಯಾಯವಾಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುವ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿರುವ ಮಂಗಳೂರಿನ ಆನಿಮಲ್ ಕೇರ್ ಟ್ರಸ್ಟ್ ಈಗಾಗಲೇ ಅನೇಕ ದತ್ತು ಶಿಬಿರಗಳ ಮೂಲಕ ಪುಟ್ಟ, ಮುಗ್ಧ ಪ್ರಾಣಿಪಕ್ಷಿಗಳಿಗೆ ಬೆಚ್ಚನೆಯ ಸೂರು ಒದಗಿಸಿದೆ. ಇದೀಗ ಮತ್ತೊಂದು ದೇಸೀ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತುಕೊಡುವ ಶಿಬಿರವನ್ನು ಮಂಗಳೂರಿನ ಚಿಲಿಂಬಿ ದ್ವಾರದ ಬಳಿ ಇರುವ ಪೈಸೇಲ್ಸ್ ಶೋರೂಂನಲ್ಲಿ ಮೇ 12ರಂದು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದೆ.

ಪ್ರಾಣಿಗಳ ಸುರಕ್ಷತೆಯ ಹಿನ್ನೆಲೆಯಲ್ಲಿ ದೇಸೀ ತಳಿಯ ಬೆಕ್ಕು, ನಾಯಿ-ಮರಿಗಳನ್ನು ದತ್ತುಕೊಡಲು ಕೆಲವೊಂದು ನಿಯಮಗಳನ್ನು ಕೂಡ ರೂಪಿಸಲಾಗಿದೆ. ನೋಂದಣಿ ಶುಲ್ಕ 200 ರೂ ಇದ್ದು, ಇದರಲ್ಲಿ ರೇಬೀಸ್ ತಡೆಯುವ ಲಸಿಕೆಯ ಶುಲ್ಕ ಕೂಡಾ ಸೇರಿದೆ. ಇನ್ನು ಶಿಬಿರದಲ್ಲಿ ಪ್ರಾಣಿಗಳನ್ನು ದತ್ತು ಪಡೆಯಬೇಕಾದ್ರೆ ನಿಮ್ಮ ವಿಳಾಸದ ನಕಲು ಪತ್ರವನ್ನು ಕಡ್ಡಾಯವಾಗಿ ಕೊಡಬೇಕಾಗುತ್ತೆ. ಅಲ್ಲದೆ ನಾಯಿ ಬೆಕ್ಕಿಗೆ ಸಂತಾನವಾಗದಂತೆ ಚಿಕಿತ್ಸೆಯನ್ನು ಕೂಡ ಮಾಡಿಸಬೇಕು. ಜೊತೆಗೆ ತಿಂಗಳಿಗೊಮ್ಮೆ ನಿಮ್ಮ ನಾಯಿ-ಬೆಕ್ಕಿನ ಮರಿಯ ಬಗ್ಗೆ ವರದಿ ಕೊಡುವುದು ಕೂಡ ಕಡ್ಡಾಯವಾಗಿದೆ. ಈ ಮೂಲಕ ಮುಗ್ಧ ಪ್ರಾಣಿಗಳಿಗೆ ಸುರಕ್ಷತೆಯ ಸೂರು ಒದಗಿಸುವ ಕೆಲಸ ಆನಿಮಲ್ ಕೇರ್ ಟ್ರಸ್ಟ್ ಮೂಲಕ ನಡೆಯುತ್ತಿದೆ.

Related posts

Leave a Reply

Your email address will not be published. Required fields are marked *