Header Ads
Breaking News

ಮೇ 26ರಂದು ಕನ್ನಡ ವೈದ್ಯಬರಹಗಾರರ ಪ್ರಥಮ ರಾಜ್ಯ ಸಮ್ಮೇಳನ: ಡಾ. ಅಣ್ಣಯ್ಯ ಕುಲಾಲ್ ಹೇಳಿಕೆ

ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ರಾಜ್ಯ ಶಾಖೆಯ ವತಿಯಿಂದ ಕನ್ನಡ ವೈದ್ಯ ಬರಹಗಾರರ ಪ್ರಥಮ ರಾಜ್ಯ ಸಮ್ಮೇಳನವು ಮೇ 26ರಂದು ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದ ಎವಿ ರಾವ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಅಣ್ಣಯ್ಯ ಕುಲಾಲ್ ತಿಳಿಸಿದರು.

ಈ ಬಗ್ಗೆ ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಮಾರು 92 ವರ್ಷಗಳಷ್ಟು ಇತಿಹಾಸ ಇರುವ ವಿಶ್ವದ ಅತಿ ದೊಡ್ಡ ಸರ್ಕಾರೇತರ ಸಂಘಟನೆಯಾಗಿರುವ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಶಾಖೆಯ ಮಾರ್ಗದರ್ಶನದಲ್ಲಿ ಮಂಗಳೂರು ಶಾಖೆಯ ಆಶ್ರಯದಲ್ಲಿ ಪ್ರಪ್ರಥಮ ಕನ್ನಡ ವೈದ್ಯ ಬರಹಗಾರರ ಸಮ್ಮೇಳನವನ್ನು ಮಂಗಳೂರಿನಲ್ಲಿ ಆಯೋಜಿಲಸಾಗಿದೆ. ಸಮ್ಮೇಳನವು ಮೇ 26ರಂದು ಮಂಗಳೂರಿನ ಭಾರತೀಯ ವೈದ್ಯಕೀಯ ಸಂಘದ ಎವಿ ರಾವ್ ಸಭಾಂಗಣದಲ್ಲಿ ಜರುಗಿಸಲು ತಿರ್ಮಾನಿಸಿದ್ದೇವೆ. ನಾಡಿನ ಖ್ಯಾತ ವೈದ್ಯ ಬರಹಗಾರರು ವಿವಿಧ ಗೋಷ್ಠಿಗಳನ್ನು ನಡೆಸಿಕೊಡುವರು ಎಂದು ತಿಳಿಸಿದರು. ರಾಜ್ಯದ 175 ಶಾಖೆಗಳ ಸುಮಾರು 300ರಷ್ಠು ವೈದ್ಯ ಬರಹಗಾರರು ನೊಂದಾಯಿಸಿಕೊಂಡು ಚರ್ಚೆ ಚಿಂತನ ಮಂಥನಗಳಲ್ಲಿ ಭಾಗವಹಿಸಿ ಕವನ ಹಾಗೂ ಲೇಖನ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಸಮ್ಮೇಳನಾ ಸಮಿತಿ ಹಾಗೂ ಐಎಂಎ ಮಂಗಳೂರು ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ, ಕಾರ್ಯದರ್ಶಿ ಡಾ. ಸುಧೀಂದ್ರ ರಾವ್ ಎಂ. ಡಾ. ಅಮೃತಾ ಭಂಡಾರಿ, ಡಾ. ಜಿ.ಕೆ ಭಟ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *