Header Ads
Breaking News

ಮೇ 26ರಂದು ಶ್ರೀ ಗುರುರಾಘವೇಂದ್ರ ಮಠದಲ್ಲಿ ಬ್ರಹ್ಮಕಲಶೋತ್ಸವ : ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

 ನವ ವೃಂದಾವನ ಸೇವಾ ಪ್ರತಿಷ್ಠಾನ (ರಿ) ಹೊಸಬೆಟ್ಟುವಿನ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರು ಸಾರ್ವಭೌಮರ ಮೂಲಮೃತ್ತಿಕಾ ಪ್ರತಿಷ್ಟಾಪನೆಯಾದ ಬೃಂದಾವನಕ್ಕೆ ಪಂಚಶತಕಲಾ ಸಹಿತ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಉಡುಪಿ ಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರ ಕರಕಮಲದಿಂದ ಹಾಗೂ ವೇದಮೂರ್ತಿ ಚಿತ್ರಾಪುರ ಕಗ್ಗಿ ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಮೇ 26ರಂದು ಬಹಳ ಅದ್ಧೂರಿಯಾಗಿ ನಡೆಯಲಿದೆ. ಈ ಪ್ರಯುಕ್ತ ಮಠದಲ್ಲಿ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ನೇರವೆರಿತ್ತು.

ಹೊಸಬೆಟ್ಟುವಿನ ಶ್ರೀ ಗುರುರಾಘವೇಂದ್ರ ಮಠದಲ್ಲಿ ಮೇ26ರಂದು ಬ್ರಹ್ಮಕಲಶೋತ್ಸವ ಬಹಳ ಅದ್ಧೂರಿಯಾಗಿ ನಡೆಯಲಿದೆ. ಈ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪ್ರತಿನಿತ್ಯ ಭಜನಾ ಕಾರ್ಯಕ್ರಮ ನಡಿತಾ ಇದೆ. ಈ ಸಂದರ್ಭ ಕೀರ್ತಿಶೇಷ ಹರಿದಾಸರತ್ನ ಹೊಸಬೆಟ್ಟು ವಾದೀಶ ಆಚಾರ್ಯ ವೇದಿಕೆಯಲ್ಲಿ ಧಾರ್ಮಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತ್ತುಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊಸಬೆಟ್ಟು ಶ್ರೀ ಗುರುರಾಘವೇಂದ್ರ ಸ್ವಾಮಿ ಮಠ ಹೊರೆಕಾಣಿಕೆ ಮೆರವಣಿಗೆ ನಡೆಯಿತ್ತು. ಈ ಸಂದರ್ಬದಲಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸ್ವಾಮೀಜಿ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಇವರಿಂದ ಆಶೀರ್ವಚನ ಕಾರ್ಯಕ್ರಮವು ನೆರವೇರಿತ್ತು.

ಇನ್ನು ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅಮರ್ ಮೆರೈನ್ ಎಂಟರ್ ಪ್ರೈಸಸ್ ಬೈಕಂಪಾಡಿಯ ಮಾಲಕರು ಅಮರನಾಥ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದರು. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮಹಾಬಲ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.


ಈ ಸಂದರ್ಭ ಬಾಲಕೃಷ್ಣ ಗೌಡ, ಗಣೇಶ ಹೊಸಬೆಟ್ಟು, ವಿಜಯ ತುಂಗಪ್ಪ ಉಜಿರೆ, ಮೊದಲಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷರು ಹರಿಕೃಷ್ಣ ಪುನರೂರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ವಿಶ್ವೇಶ್ವರ ಬದವಿದೆ ಹೊಸಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ ವ್ಯವಸ್ಥಾಪನ ಸಮಿತಿ ಸಂಚಾಲಕರು ಪುಂಡಲೀಕ ಹೊಸಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಮತ್ತು ಅನುವಂಶಿಕ ಮೊಕ್ತೇಸರರು ನವ ವೃಂದಾವನ ಸೇವಾ ಪ್ರತಿಷ್ಠಾನದ ಕೋಶಾಧಿಕಾರಿ ರಾಘವೇಂದ್ರ ಎಚ್.ವಿ., ಕಾರ್ಯದರ್ಶೀ ಬಂಟ್ವಾಳ ಮೋನಪ್ಪ ಗೌಡ ಉಪಸ್ಥಿತರಿದ್ದರು. ಸಂಜೆಯ ಹೊತ್ತಿಗೆ ವೃಂದಾವನ ನಗರ ಹೊಸಬೆಟ್ಟು ಹಾಗೂ ಸ್ಥಳೀಯ ಪ್ರತಿಭೇಗಳಿಂದ ವೈವಿಧ್ಯಮಯ ಕಾರ್ಯಕ್ರಮ ನೇರವೆರಿತ್ತು.

Related posts

Leave a Reply

Your email address will not be published. Required fields are marked *