Header Ads
Breaking News

ಮೇ 28ರಂದು ಪಡೀಲ್‌ನಲ್ಲಿ ಕಾಪಿಕಾಡ್ ಭಾಗವತಿಕೆ..ಕೇಳಲು ಮರೆಯದಿರಿ..

ಇದೊಂದು ಹೊಸ ಪ್ರಯೋಗ. ಯಕ್ಷಧ್ರುವ ಪಟ್ಲ ಂಡೇಶನ್ ಟ್ರಸ್ಟ್‌ನ ೨ನೇ ವಾರ್ಷಿಕೋತ್ಸವವು ಮೇ ೨೮ರಂದು ಪಡೀಲ್‌ನಲ್ಲಿರುವ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಜರಗಲಿದ್ದು, ಅಂದು ಖ್ಯಾತ ರಂಗಭೂಮಿ ಮತ್ತು ಸಿನಿಮಾ ನಟ ದೇವದಾಸ್ ಕಾಪಿಕಾಡ್ ಅವರು ಭಾಗವತರಾಗಲಿದ್ದಾರೆ. ಜತೆಗೆ ಭೋಜರಾಜ ವಾಮಂಜೂರು, ಅರವಿಂದ ಬೋಳಾರ್, ನವೀನ್ ಡಿ. ಪಡೀಲ್ ಅವರಂತಹ ಖ್ಯಾತ ಕಲಾವಿದರು ಯಕ್ಷಗಾನಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಇದು ವಿಶೇಷವಾದರೂ ನಿಜ, ಆಶ್ಚರ್ಯವಾದರೂ ಸತ್ಯ!
ಖ್ಯಾತ ಗಾಯಕರೂ ಆಗಿರುವ ಕಾಪಿಕಾಡ್ ಅವರು ಯಕ್ಷಗಾನದ ಹಾಡನ್ನೂ ಈ ಹಿಂದೆ ಹಾಡಿದ್ದಿದೆ. ದಶಕದ ಹಿಂದೆ ಅವರು ಸ್ಕಿಟ್ ಒಂದರಲ್ಲಿ ಭಾಗವತಿಕೆ ಮಾಡಿದ್ದು ಕ್ಯಾಸೆಟ್ ರೂಪದಲ್ಲಿ ಹೊಸ ಬಂದು ಭಾರೀ ಖ್ಯಾತಿ ಗಳಿಸಿತ್ತು. ಈಗಲೂ ಅವರು ಯಕ್ಷಗಾನದ ಹಾಡು ಹಾಡಲು ಉತ್ಸುಕರಾಗಿದ್ದು, ಅದಕ್ಕೆ ಒಂದು ವೇದಿಕೆ ಒದಗಿಸಿಕೊಟ್ಟದ್ದು ಖ್ಯಾತ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರು