Header Ads
Breaking News

ಮೇ 31ರಂದು ಮಂಗಳೂರಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ವಿಶ್ವ ತಂಬಾಕು ರಹಿತ ದಿನಾಚರಣೆ-2019ರ ಪ್ರಯುಕ್ತ ಸರ್ಕಾರದ ಹಲವು ಇಲಾಖೆಗಳ ಸಹಯೋಗದೊಂದಿಗೆ ‘ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಎನ್ನುವ ವಿಷಯದ ಕುರಿತು ಜಾಗೃತಿ ಕಾರ್ಯಗಾರ’ ಮೇ 31ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‍ನ ಡೀನ್ ಡಾ.ದಿಲೀಪ್ ನಾಯಕ್ ಹೇಳಿದರು.ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ, ಮೇ 31 ವಿಶ್ವ ತಂಬಾಕು ರಹಿತ ಪ್ರತೀ ವರ್ಷ ನಾವು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಈ ವರ್ಷವೂ ಕೂಡ ವಿಶೇಷ ಮುತುವರ್ಜಿ ವಹಿಸಿ ಮಂಗಳೂರು ನಗರವನ್ನು ತಂಬಾಕು ತಹಿತ ನಗರವನ್ನಾಗಿಸುವ ಪ್ರಯತನ ಮಾಡುತ್ತಿದ್ದೇವೆ ಅದ್ದರಿಂದ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಎನ್ನುವ ವಿಷಯದ ಕುರಿತು ಜಾಗೃತಿ ಕಾರ್ಯಗಾರ ಮೇ 31ರಂದು ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಿದ್ದೇವೆ ಎಂದು ಹೇಳಿದರು. ದ.ಕ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಡಾ.ಪ್ರೀತಾ ಮಾತನಾಡಿ ತಂಬಾಕಿನಿಂದ ಆಗುವ ದುಷ್ಪರಿಣಾಮಗಳು ಹಾಗೂ ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಎನ್ನುವ ವಿಚಾರದ ಕರಿತು ಮಾಹಿತಿ ನೀಡಿದರು. ಈ ಸಂದರ್ಭ ಕಾರ್ಯಕ್ರಮದ ಸಂಚಾಲಕರಾದ ಡಾ.ಪ್ರವೀಣ್ ಕುಮಾರ್ ಸಿ.ಹೆಚ್, ಡಾ.ಜಿ.ರಾಜೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *