Header Ads
Breaking News

ಮೇ. 7ರಂದು ಶಿರ್ಲಾಲು ಶ್ರೀ ಸಿದ್ಧಗಿರಿ ಕ್ಷೇತ್ರ ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕ

ಶಿರ್ಲಾಲು ಶ್ರೀ ಸಿದ್ಧಗಿರಿ ಕ್ಷೇತ್ರ ಅತಿಶಯ ಕ್ಷೇತ್ರ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ರಜತ ರಥೋತ್ಸವ ಮತ್ತು ಮಹಾಮಸ್ತಕಾಭಿಷೇಕವು ಮೇ. 7ರಂದು ಜರಗಲಿದೆ.

ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿ ಆಡಳಿತ ಸಮಿತಿ ಕಾರ್ಯದರ್ಶಿ ಸುದರ್ಶನ ಅತಿಕಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಕಾರ್ಕಳ ಶ್ರೀ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮೇ.5ರಿಂದ 7ರ ತನಕ ಭಗವಾನ್ ಶ್ರೀ ಅನಂತನಾಥ ಸ್ವಾಮಿಯ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ದೇವಿಯ ರಜತ ರಥಾಯಾತ್ರಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.

ಪ್ರಥಮ ಕಲಶ, ಎಳನೀರು, ಇಕ್ಷುರಸ ಅಭಿಷೇಕ, ಕ್ಷೀರಾಭಿಷೇಕ, ಕಲ್ಕಚೂರ್ಣ ಅಭಿಷೇಕ, ಅರಶಿನ ಅಭಿಷೇಕ, ಕಷಾಯ ಅಭಿಷೇಕ, ಚತುಷ್ಕೋಣ ಅಭಿಷೇಕ, ಶ್ರೀಗಂಧ ಅಭಿಷೇಕ, ಅಷ್ಟಬಂಧ ಅಭಿಷೇಕ, ಪುಷ್ಪವೃಷ್ಠಿ ಮತ್ತು ಆರತಿ ನಡೆಯಲಿದೆ. ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಯಶ್ರೀ ಧರಣೇಂದ್ರ ಕುಮಾರ್ ಮತ್ತು ತಂಡದವರಿಂದ ಜಿನಭಕ್ತಿ ಗೀತೆ ಕಾರ್ಯಕ್ರಮ ಜರಗಲಿದೆ ಎಂದು ಸಮಿತಿ ಅಧ್ಯಕ್ಷ ಡಾ| ಮಹಾವೀರ ಜೈನ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿ ಉಪಾಧ್ಯಕ್ಷ ಸನತ್ ಕುಮಾರ್, ಆದಿರಾಜ ಅಜ್ರಿ ಸಾಂತ್ರಬೆಟ್ಟು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *