Header Ads
Breaking News

ಮೈತ್ರಿ ಅಭ್ಯರ್ಥಿ ಪ್ರಮೋದ್‌ರಿಂದ ದ್ವಾರಕಾಮಯಿ, ಹೆಜಮಾಡಿ, ಬಂಟಕಲ್ಲುವಿನಲ್ಲಿ ಮತಯಾಚನೆ

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ದ್ವಾರಕಾಮಯಿಯ ಶ್ರೀ ಸಾಯಿಬಾಬಾ ಸಾಂತ್ವಾನ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಆಶೀರ್ವಾದವನ್ನು ಪಡೆದುಕೊಂಡರು. ಹೆಜಮಾಡಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್ ಅವರು ಪಾದಯಾತ್ರೆ ಮೂಲಕ ತೆರಳಿ ಮತಯಾಚಿಸಿದರು. ಆನಂತರ ಶ್ರೀ ವಿಶ್ವಕರ್ಮ ಸಂಘ ಮತ್ತು ಶ್ರೀ ವಿಶ್ವಕರ್ಮ ಟ್ರಸ್ಟ್ ಬಂಟಕಲ್ಲುವಿಗೆ ತೆರಳಿ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಜೊತೆಗಿದ್ದು ಮತಯಾಚನೆಯಲ್ಲಿ ತೊಡಗಿದ್ದರು.

Related posts

Leave a Reply

Your email address will not be published. Required fields are marked *