Header Ads
Header Ads
Breaking News

ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಈಜು ಚಾಂಪಿಯನ್‌ಶಿಪ್ ಮಂಗಳೂರಿನ ರಚನಾ ಎಸ್. ಆರ್. ರಾವ್ ದಾಖಲೆ

ಮೈಸೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆದ ರಾಜ್ಯ ಜೂನಿಯರ್, ಸಬ್ ಜೂನಿಯರ್ ಈಜು ಚಾಂಪಿಯನ್‌ಶಿಪ್ ತೆರೆ ಕಂಡಿದ್ದು, ಮಂಗಳೂರಿನ ಸ್ವಿಮ್ಮಿಂಗ್ ಕ್ಲಬ್‌ನ ರಚನಾ ಎಸ್. ರಾವ್ ಮೂರು ಚಿನ್ನದ ಪದಕ ಪಡೆದು ದಾಖಲೆ ನಿರ್ಮಿಸಿದ್ದಾಳೆ.ರಾಜ್ಯದ ಇತರ ಭಾಗಗಳಿಂದ ಈಜು ಪ್ರತಿಭೆಗಳು ಬೆಳಕಿಗೆ ಬಂದಿದ್ದು, ಕಡಿಮೆ. ಬೆಂಗಳೂರಿನ ಸ್ಪರ್ಧಿಗಳಿಗೆ ಸೆಡ್ಡು ಹೊಡೆದು ಬೆಳೆದ ಸ್ಪರ್ಧಿಗಳು ಕೆಲವರಯ ಮಾತ್ರ ಅಂತವರಲ್ಲಿ ಮಂಗಳೂರಿನ ಮಂಗಳಾ ಈಜು ಕೇಂದ್ರದ ರಚನಾ ಎಸ್. ಆರ್. ಒಬ್ಬರು.14 ರ ಹರೆಯದ ರಚನಾ ಅವರು, ವಿವಿಧ ಕೂಟದಲ್ಲಿ ಈಗಾಗಲೇ ನೂರಕ್ಕೂ ಅಧಿಕ ಪದಕಗಳನ್ನು ಗೆದ್ದಿದ್ದಾರೆ.

   

ಮೈಸೂರಿನಲ್ಲಿ ನಡೆದ ರಾಜ್ಯ ಜೂನಿಯರ್ ಮತ್ತು ಸಬ್ ಜ್ಯೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.ಮಂಗಳೂರು ಸ್ವಿಮ್ಮಿಂಗ್ ಕ್ಲಬ್‌ನ ರಚನಾ ಎಸ್. ಆರ್. ರಾವ್, ಸಾನ್ಯಾ ಡಿ. ಶೆಟ್ಟಿ, ಸುವಲಿ ಪಿ. ಶೆಟ್ಟಿ ಮತ್ತು ಪುತ್ತೂರು ಈಜು ಕೇಂದ್ರದ ನೀಲ್ ಮಸ್ಕರೇನಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ರಚನಾ ಎಸ್. ಆರ್ ರಾವ್, ಬ್ರೆಸ್ಟ್ ಸ್ಟೋಕ್‌ನಲ್ಲಿ ಪ್ರಥಮ ಸ್ಥಾನವನನು ಪಡೆದುಕೊಂಡಿದ್ದು, ಒಟ್ಟು ಮೂರು ಪದಕವನ್ನು ಪಡೆದುಕೊಂಡಿದ್ದಾಳೆ. ಗುಂಪು2ರಲ್ಲಿ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದಿರುತ್ತಾಳೆ.ಇನ್ನೂ ಬಾಲಕಿಯರ ವಿಭಾಗದಲ್ಲಿ ಗುಂಪು 1ರಲ್ಲಿ 100 ಮೀಟರ್ ಬಟರ್‌ಪ್ಲೈನಲ್ಲಿ ಸಾನಿಯಾ ಡಿ. ಶೆಟ್ಟಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದುಕೊಂಡಿದ್ದಾಳೆ. ಹಾಗೆಯೇ ಪುತ್ತೂರು ಈಜು ಕೇಂದ್ರದ ನೀಲ್ ಮಸ್ಕರೇನಸ್ ಬ್ರೆಸ್ಟ್‌ಸ್ಟೋಕ್‌ನಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾನೆ.

Related posts

Leave a Reply