Header Ads
Header Ads
Breaking News

ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಚೆಸ್, ಉ. ಪ್ರ.ದ ದಿನೇಶ್ ಚಾಂಪಿಯನ್

ಅತ್ಯುತ್ತಮ ಪ್ರದರ್ಶನ ತೋರಿದ ಉತ್ತರ ಪ್ರದೇಶದ ಕೆ. ದಿನೇಶ್ ಶರ್ಮ ಅವರು ಮೈಸೂರು ಜಿಲ್ಲಾ ಚೆಸ್ ಸಂಸ್ಥೆ ಆಶ್ರಯದ ಎಸ್. ಕೆ. ಆನಂದತೀರ್ಥ ಸ್ಮರಣಾರ್ಥ ರಾಷ್ಟ್ರಮಟ್ಟದ ಓಪನ್ ಚೆಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ಹೊಯ್ಸಳ ಕರ್ನಾಟಕ ಸಂಘದ ಆವರಣದಲ್ಲಿ ನಡೆದ ಟೂರ್ನಿಯಲ್ಲಿ ಅವರು ಎಂಟು ಪಾಯಿಂಟ್ ಪಡೆದು ಈ ಸಾಧನೆ ಮಾಡಿದರು. ಅಂತರರಾಷ್ಟ್ರೀಯ ಮಾಸ್ಟರ್ ದಿನೇಶ್ ಅವರು ೯ನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ತಮಿಳು ನಾಡಿನ ಕೆ. ಸೆಂಥಿಲ್ ಮಾರನ್ ಎದುರು ಗೆಲುವು ಸಾಧಿಸಿದರು.
ಅವರು ರೂ. ೨೦,೦೦೦ ಬಹುಮಾನ ಹಾಗೂ ಟ್ರೋಫಿ ಪಡೆದರು. ಎರಡನೇ ಸ್ಥಾನ ಆಂಧ್ರ ಪ್ರದೇಶದ ವೆಂಕಟರಮಣ ಕಾರ್ತಿಕ್ ೭.೫ ಪಾಯಿಂಟ್ ಪಾಲಾಯಿತು. ಅವರು ರೂ. ೧೫,೦೦೦ ಬಹುಮಾನ ಪಡೆದರು. ತಮಿಳುನಾಡಿನ ರಾಮ್ ಎಸ್. ಕೃಷ್ಣನ್ ಮೂರನೇ ಸ್ಥಾನ ಗಳಿಸಿದರು.

Related posts

Leave a Reply