Header Ads
Breaking News

“ಮೈ ಪೀಸ್ ಮೈ ಚೋಯ್ಸ್” ಕಿರುಚಿತ್ರ ಬಿಡುಗಡೆ

ಮಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಸೈಂಟ್ ಅಲೋಶಿಯಸ್ ಗೊಂಝಾಗ ಸ್ಕೂಲ್‌ನಲ್ಲಿ ರೆವರೆಂಡ್ ಫಾದರ್ ನೆಲ್ಸನ್ ಡಲ್ಮೇಡಾರವರು ನಿರ್ದೇಶಿಸಿದ ’ಮೈ ಪೀಸ್ ಮೈ ಚೋಯ್ಸ್’ ಎನ್ನುವ ಮೌಲ್ಯಧಾರಿತ ಕಿರುಚಿತ್ರ ಬಿಡುಗಡೆ ಸಮಾರಂಭ ನಡೆಯಿತು.ಕಿರುಚಿತ್ರವನ್ನು ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಅತೀ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನರವರು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು ರೆವರೆಂಡ್ ಫಾದರ್ ನೆಲ್ಸನ್ ಡಲ್ಮೇಡಾರವರು ಮಕ್ಕಳ ಮನಸ್ಸನ್ನು ಅರ್ಥಮಡಿಕೊಂಡಿದ್ದಾರೆ.   ಯಾಕೆಂದರೆ ಮಕ್ಕಳು ಕೇಳಿ ಕಲಿಯುವುದಕ್ಕಿಂತ ಹೆಚ್ಚಾಗಿ ನೋಡಿ ಕಲಿಯುತ್ತಾರೆ.ಆದ್ದರಿಂದ ಇತಹಾ ಕಿರುಚಿತ್ರ ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಹೇಳಿದರು.ನಂತರ ಮಂಗಳೂರು ಸಂತ ಅಲೋಶಿಯಸ್ ವಿದ್ಯಾಸಂಸ್ಥೆಗಳ ರೆಕ್ಟರ್ ರೆವರೆಂಡ್ ಫಾದರ್ ಡೈನೀಶಿಯಸ್ ವಾಸ್ ಮತನಾಡಿ ಇದು ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವ ಕಿರುಚಿತ್ರ ಮತ್ತು ಇತ್ತಿಚಿನ ದಿನಗಳಲ್ಲಿ ಇದು ಅನಿವಾರ್ಯವು ಕೂಡ ನಾವು ಎಷ್ಟೋ ಸಿನೆಮಗಳನ್ನು ನೋಡುತ್ತೇವೆ ಆದರೆ ಉತ್ತಮ ಸಂದೇಶವನ್ನು ನೀಡುವ ಸಿನಿಮಗಳ ಅಗತ್ಯವಿದೆ ಎಂದು ಹೆಳಿದರು.ಈ ವೇಳೆ ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಅತೀ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನರವರಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂತ ಅಲೋಶಿಯಸ್ ಗೊಂಝಾಗ ಶಾಲೆಯ ಮ್ಯಾನೆಜರ್ ರೆವರೆಂಡ್ ಫಾದರ್ ಮೆಲ್ವೀನ್ ಮೆಂಡೋನ್ಸಾ, ಸಂತ ಅಲೋಶಿಯಸ್ ಗೊಂಝಾಗ ಶಾಲೆಯ ಪ್ರಾಂಶುಪಾಲರಾದ ಗ್ರೇಸ್ ನೊರೋನಾ, ರೆವರೆಂಡ್ ಫಾದರ್ ನೆಲ್ಸನ್ ಡಲ್ಮೇಡಾ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply