Header Ads
Header Ads
Header Ads
Breaking News

ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಮೋದಿ ಸ್ವಾಗತಕ್ಕೆ ಇರದ ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು: ಇದೇ ಮೊದಲ ಬಾರಿಗೆ ಧರ್ಮ ಸ್ಥಳ ದೇವಸ್ಥಾನಕ್ಕೆ ಪ್ರಧಾನಿಯೋ ರ್ವರು ಭೇಟಿ ನೀಡುವ ಕಾರ್ಯಕ್ರಮ ರವಿವಾರ ಜರಗಿದ್ದು, ಆ ಸಂದರ್ಭ ಮಂಗಳೂರಿನಲ್ಲಿ ಬಂದಿಳಿದ ಅವರನ್ನು ಸ್ವಾಗತಿಸಲು ಜಿಲ್ಲೆಯ ಉಸ್ತುವಾರಿ ಸಚಿವರು ಇರಲಿಲ್ಲ. ಪ್ರಧಾನಿ ಭೇಟಿ ಯೇ ಒಂದು ಚಾರಿತ್ರಿಕ ಕಾರ್ಯಕ್ರಮ ವಾಗಿದ್ದು, ಅಂಥ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಗೈರು ಒಂದು ಕಪ್ಪುಚುಕ್ಕೆಯಾಗಿತ್ತು ಎಂಬುದು ನಿರಾಕರಿಸುವಂಥ ಸಂಗತಿಯೇನಲ್ಲ.

ರಾಜ್ಯ ಸರಕಾರದ ಪರವಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಉಪಸ್ಥಿತರಿದ್ದರು ಮತ್ತು ಮಂಗಳೂ ರಿನ ಮೇಯರ್ ಅವರು ಕೂಡ ಸ್ವಾಗತಿಸಿದ್ದರು. ಆದರೆ ಉಸ್ತುವಾರಿ ಸಚಿವರ ಗೈರು ಉದ್ದೇಶಪೂರ್ವ ಕವೋ ಎಂಬ ಪ್ರಶ್ನೆ ಕಾಡದೆ ಇರಲಿಲ್ಲ.

ನರೇಂದ್ರ ಮೋದಿ ಅವರನ್ನು ಬಿಜೆಪಿ ಮುಖ್ಯಸ್ಥನಾಗಿ ಕಾಂಗ್ರೆಸ್‌ನವರು ವಿರೋಧಿಸಬಹುದು, ಒಪ್ಪದೆ ಇರಬಹುದು. ಆದರೆ ಪ್ರಧಾನಿಯಾಗಿ ಅವರನ್ನು ದೇಶದ ಪ್ರಜೆಗಳೆಲ್ಲರೂ ಸ್ವೀಕರಿಸಲೇಬೇಕು. ಅದರಿಂದ ಕಾಂಗ್ರೆಸ್ ನಾಯಕರು ಹೊರಗಿರುವುದು ಅಸಾಧ್ಯ. ಈ ಹಿಂದೆ ಬೆಂಗಳೂರಿಗೆ ಬಂದಿದ್ದಾಗ ಸ್ವತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಮಾನ ನಿಲ್ದಾಣದಲ್ಲಿ ನಿಂತು ಹೂಗುಚ್ಛ ಕೊಟ್ಟು ಸ್ವಾಗತಿಸಿದ್ದರು. ಅವರಿಗಿಂತಲೂ ನಮ್ಮ ಉಸ್ತುವಾರಿ ಸಚಿವರು ದೊಡ್ಡವರಾಗಿಬಿಟ್ಟರೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಈಗಾಗಲೇ ಹಲವು ವಿವಾದಗಳಿಗೆ ಸಿಲುಕಿರುವ ಉಸ್ತುವಾರಿ ಸಚಿವರು ಪ್ರಧಾನಿ ಭೇಟಿ ಸಂದರ್ಭದಲ್ಲಿ ಗೈರಾಗುವು ಮೂಲಕ ಮತ್ತೊಂದು ಬಾರಿ ಜನರೆದುರು ಸಣ್ಣವರಾಗುವಂತಾಗಿದೆ. ಪ್ರಧಾನಿಯನ್ನು ಉಸ್ತುವಾರಿ ಸಚಿವರು ಸ್ವಾಗತಿಸಿಲ್ಲ ಎಂಬ ಕಾರಣಕ್ಕಾಗಿ ಪ್ರಧಾನಿಗೇನೂ ಕಡಿಮೆಯಾಗದು. ಇಲ್ಲಿ ಉಸ್ತುವಾರಿಯ ಇದೆ ಎಂದು ಹೇಳಲಾಗುವ ಅತಿಯಾದ ಅಹಂ ಅಥವಾ ಬೇರೆ ಯಾವುದೋ ಕಾರಣಗಳು ಅವರನ್ನು ಸಣ್ಣವರಾಗಿ ಮಾಡುತ್ತದೆ. ಒಂದು ಶಿಷ್ಟಾಚಾರವನ್ನು ಪಾಲಿಸಲೂ ಅವರಿಗೆ ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿಯೇ. ಹಾಗೆಂದು ಪ್ರಧಾನಿ ದಿಢೀರ್ ಆಗಿ ಭೇಟಿ ನೀಡಿದ್ದೇನೂ ಅಲ್ಲ. ಅವರ ಭೇಟಿ ಕೆಲವು ದಿನಗಳ ಹಿಂದೆಯೇ ನಿಗದಿಯಾಗಿದ್ದು, ಸಾಕಷ್ಟು ತಯಾರಿಯೂ ನಡೆದಿತ್ತು. ಸಚಿವರು ಎಷ್ಟು ಬ್ಯುಸಿಯಾಗಿದ್ದರೂ ಈ ಸಂದರ್ಭದಲ್ಲಿ ಪುರುಸೊತ್ತು ಮಾಡಲೇಬೇಕಿತ್ತು. ಕೆಲಸದ ಒತ್ತಡ ಹೇಳಿ ನುಣುಚಿಕೊಳ್ಳಲು ಇದು ಸೂಕ್ತ ಪರಿಸ್ಥಿತಿಯಂತು ಅಲ್ಲವೇ ಅಲ್ಲ. ಜಿಲ್ಲಾಡಳಿತ ವ್ಯವಸ್ಥಿತವಾಗಿ ತುಂಬಾ ಅಚ್ಚುಕಟ್ಟಿನಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರ ಗೈರು ಒಂದು ಕಪ್ಪುಚುಕ್ಕೆಯಾಗಿ ಹೋಯಿತಲ್ಲ ಎಂಬ ನೋವು ಜನರದ್ದು.

Related posts

Leave a Reply