Header Ads
Breaking News

ಮೊದಲ ಮಳೆಗೆ ಈಜುಕೊಳವಾದ ಮಂಜೇಶ್ವರ ಸಿರಾಜುಲ್ ಹುದಾ ರಸ್ತೆ

ಮಂಜೇಶ್ವರ: ಸುಮಾರು ಹತ್ತು ಲಕ್ಷ ರೂ. ವ್ಯಹಿಸಿ ಕಾಸರಗೋಡು ಜಿಲ್ಲಾ ಪಂಚಾಯತು ವತಿಯಿಂದ ನಿರ್ಮಿಸಲಾದ ಸಿರಾಜುಲ್ ಹುದಾ ರಸ್ತೆ ಸೂಕ್ತವಾದ ಚರಂಡಿಯ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆಯೇ ಮಳೆ ನೀರು ಹರಿದು ಹೋಗಿ ಮೊದಲ ಮಳೆಗೆ ಈಜು ಕೊಳವಾಗಿದೆ. ನೂರಾರು ಮಂದಿ ಸಂಚರಿಸುವ ಈ ರಸ್ತೆ ಕೆದಂಬಾಡಿ, ಮಚ್ಚಂಪ್ಪಾಡಿ, ಪಾವೂರು ಮೊದಲಾದ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ. ಮಾತ್ರವಲ್ಲ ಸಿರಾಜುಲ್ ಹುದಾ ಶಾಲೆ ಸೇರಿದಂತೆ ಇತರ ಶಾಲೆ, ಚರ್ಚ್, ಮಸೀದಿ, ಮಂದಿರಗಳನ್ನು ಕೂಡಾ ಸಂಪರ್ಕಿಸುವ ರಸ್ತೆ ಇದಾಗಿದೆ. ಈ ರಸ್ತೆಯ ಕಾಮಗಾರಿಯನ್ನು ಕೂಡಾ ಗುತ್ತಿಗೆದಾರ ಕಳಪೆ ಮಟ್ಟದಲ್ಲಿ ಪೂರ್ತೀಕರಿಸಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹೊಂಡಗಳು ಕೂಡಾ ಸೃಷ್ಟಿಯಾಗಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಇದೀಗ ರಸ್ತೆಯಲ್ಲಿ ನೀರು ತುಂಬಿರುವ ಕಾರಣ ಇಲ್ಲಿಂದ ಸಂಚರಿಸುವ ವಾಹನಗಳ ಬಿಡಿ ಭಾಗಗಳು ಕೂಡಾ ಕಳಚಿ ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ. 

ಈ ಬಗ್ಗೆ ಜಿಲ್ಲಾ ಪಂ. ಸದಸ್ಯ ಹರ್ಷಾದ್ ವರ್ಕಾಡಿಯವರನ್ನು ಸಂಪರ್ಕಿಸಿದಾಗ ಸೂಕ್ತವಾದ ರೀತಿಯಲ್ಲಿ ರಸ್ತೆಯನ್ನು ಜಿಲ್ಲಾ ಪಂ.ನಿಧಿಯಿಂದ ನಿರ್ಮಿಸಲಾಗಿದೆ. ಆದರೆ ಇಲ್ಲಿಯ ನೀರು ಹರಿದು ಹೋಗಲು ಜಿಲ್ಲಾ ಪಂ. ವತಿಯಿಂದ ಫಂಡ್ ಲಭಿಸುವುದಿಲ್ಲ. ಇದಕ್ಕೆ ಶಾಸಕರ ನಿಧಿ ಅಥವಾ ಬ್ಲಾಕ್ ಪಂ. ಅಥವಾ ಗ್ರಾ. ಪಂ. ಫಂಡ್ ನಿಮ್ದ ಮಾತ್ರ ಮಾಡಲು ಸಾಧ್ಯ ಎಂಬುದಾಗಿ ಹೇಳಿದ್ದಾರೆ.
ರಸ್ತೆಯಲ್ಲಿ ಇದೀಗ ಕೆಸರು ತುಂಬಿರುವ ಹಿನ್ನೆಲೆಯಲ್ಲಿ ಈ ರಸ್ತೆಯಾಗಿ ವಾಹನ ಕಾಲಕರು ವಾಹನ ಸಂಚಾರಕ್ಕೂ ನಿರಾಕರಿಸುತ್ತಿರುವುದಾಗಿ ಸ್ಥಳೀಯರು ತಮ್ಮ ಅಳಲನ್ನು ಹೇಳಿ ಕೊಳ್ಳುತ್ತಿದ್ದಾರೆ.

Related posts

Leave a Reply

Your email address will not be published. Required fields are marked *