Header Ads
Header Ads
Header Ads
Breaking News

ಮೋದಿಯವರಿಂದ ನವ ಉದಾರೀಕರಣ ನೀತಿಗೆ ವೇಗ ದೇಶದ ಜಿಡಿಪಿ ಇಳಿಯಲು ಕಾರಣ ಉಳ್ಳಾಲದಲ್ಲಿ ಸಿಪಿ‌ಐ‌ಎಂನ ವಸಂತ ಆಚಾರಿ ಆರೋಪ

 

ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಣೆಯ ಮೂಲಕ ಕಾಂಗ್ರೆಸ್ ಪ್ರಾರಂಬಿಸಿದ ನವ ಉದಾರಿಕರಣ ನೀತಿಯನ್ನು ಬದಲಾಯಿಸುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾಮಾನ್ಯ ಜನರ ಅಭಿವೃದ್ಧಿಗೆ ಮಾರಕವಾಗಿರುವ ಉದ್ಯಮಿಗಳಿಗೆ ಸಹಕಾರವಾಗಿರುವ ನವ ಉದಾರಿಕರಣ ನೀತಿಗೆ ಅತ್ಯಂತ ವೇಗ ನೀಡಿ ಜಾರಿಗೊಳಿಸಿರುವುದೇ ದೇಶದ ಜಿಡಿಪಿ ಇಳಿಯಲು ಕಾರಣ ಎಂದು ಸಿಪಿ‌ಐ‌ಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಅಭಿಪ್ರಾಯಪಟ್ಟರು.

ಅವರು ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿ ದೇಶದಾದ್ಯಂತ ಜನ ಚಳವಳಿಯ ಅಂಗವಾಗಿ ಸಿಪಿ‌ಐ‌ಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಏರ್ಪಡಿಸಲಾಗಿದ್ದ ಕಾಲ್ನಡಿಗೆ ಜಾಥಾ ಸಂಗಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ಮೊದಲು ಇದ್ದ ೭ ಶೇಖಡಾ ಜಿಡಿಪಿ ೫.೭ಕ್ಕೆ ಇಳಿದಿದ್ದು, ಕೋಟ್ಯಾಂತರ ಜನರ ಮೇಲೆ ಸಾಲದ ಹೊರೆ ಬಿದ್ದಿದೆ. ಜಿಡಿಪಿ ಇಳಿಕೆಯಿಂದ ದೇಶ ಅಭಿವೃದ್ಧಿಯಲ್ಲಿ ಹಿಂದೆ ಹೋಗಿದೆ. ಮೂರು ವರ್ಷದ ಹಿಂದೆ ಬಿಜೆಪಿಯ ಚುನಾವಣಾ ಪ್ರಣಾಳಿಕೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಆಯ್ಕೆ ಘೋಷಣಾ ವಾಕ್ಯ, ನಮೋ ಬ್ರಿಗೇಡ್ ಮೂಲಕ ಯುವ ಜನರಿಗೆ, ನಿರುದ್ಯೋಗಿಯುವಕರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಇಂದು ವರ್ಷದಲ್ಲಿ ೨ ಕೋಟಿ ಉದ್ಯೋಗ ಸೃಷ್ಟಿಯ ಬದಲು ಕೇವಲ ಒಂದೂವರೆ ಲಕ್ಷ ಉದ್ಯೋಗ ಸೃಷ್ಟಿ ಮಾಡಲು ಪರದಾಡುತ್ತಿರುವ ಕೇಂದ್ರ ಸರಕಾರ ಬಡವರಿಗೆ, ರೈತರಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ಕಡಿತಗೊಳಿಸುವ ಮೂಲಕ ಬಂಡವಾಳಶಾಹಿಗಳಿಗೆ ಲಾಭ ಮಾಡುವ ನಿಟ್ಟಿನಲ್ಲಿ ನವ ಉದಾರಿಕರಣ ನೀತಿಗೆ ಇನ್ನಷ್ಟು ವೇಗ ನೀಡುತ್ತಿದೆ ಎಂದರು.

ನರೇಂದ್ರ ಮೋದಿ ಪ್ರದಾನಿಯಾದ ಬಳಿಕ ಸಮಸ್ಯೆ ಬಂದಾಗಲೆಲ್ಲಾ ಅದು ತಾತ್ಕಾಲಿಕ .‘ಅನೇ ವಾಲಾ ದಿನ್ ಅಚ್ಚೆ ಹೈ’ಹೇಳುವ ಮೂಲಕ ಕಳೆದ ಮೂರು ವರ್ಷಗಳಲ್ಲಿ ಬಡ ಜನರು ಶೇ. ಒಂದರಷ್ಟು ಅಭಿವೃದ್ಧಿಯಾಗಿಲ್ಲ. ಆದರೆ ಟಾಟಾ, ಬಿರ್ಲಾ, ಅದಾನಿ, ಅಂಬಾನಿಗಳ ಅಭಿವೃದ್ಧಿ ೭೨ ಶೇ. ಹೆಚ್ಚಾಗಿದೆ. ಯಾರಿಗೆ ಒಳ್ಳೆ ದಿನ ಬಂದಿದೆ ಎನ್ನುವುದನ್ನು ನರೆಂದ್ರ ಮೋದಿ ಮತ್ತು ಅವರನ್ನು ಆರಾಽಸುವ ಬಿಜೆಪಿಗರು ಹೇಳಬೇಕಾಗಿದೆ ಎಂದರು.

ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದ್ದ ನರೇಂದ್ರ ಮೋದಿ ದೇಶ ವಿರೋಽಯಾಗಿ ಬದಲಾಗುತ್ತಿದ್ದಾರೆ.ಒಂದೆಡೆ ಆರೆಸ್ಸೆಸ್ ಸ್ವದೇಶಿ ಮಂತ್ರ ಉಚ್ಚರಿಸಿದರೆ. ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ವಿಧೇಶಗಳಿಗೆ ಸುತ್ತಿ ದೇಶದ ಬೊಕ್ಕಸಕ್ಕೂ ನಷ್ಟ ಮಾಡುವುದರೊಂದಿಗೆ ದೇಶದ ರಕ್ಷಣಾ ವಿಚಾರದಲ್ಲಿ ಯುದ್ದೋಪಕರಣಗಳನ್ನು ತಯಾರಿಸುವ ನಿಟ್ಟಿನಲ್ಲಿ ವಿದೇಶಗಳೊಂದಿಗೆ ಒಪ್ಪಂದ ಮಾಡುತ್ತಿದ್ದಾರೆ. ಇದೊಂದು ಗಂಭೀರ ವಿಚಾರವಾಗಿದ್ದು, ಭಾರತ ಅಮೇರಿಕಾದ ಬಾಲಂಗೋಚಿ ವಿದೇಶಾಂಗ ನೀತಿಯನ್ನು ಅನುಸರಿಸುತ್ತಿದ್ದು, ಭಾರತದ ವಿದೇಶಾಂಗ ನೀತಿ ಅಲಿಪ್ತ ನೀತಿಯನ್ನು ಕಡೆಗಣಿಸುತ್ತಿದೆ ಎಂದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಉಳ್ಳಾಲ ಕೋಟೆಪುರದಿಂದ ಜಿಲ್ಲಾ ಸಮಿತಿ ಸದಸ್ಯೆ ಪದ್ಮಾವತಿ ಶೆಟ್ಟಿ ನೇತೃತ್ವದಲ್ಲಿ, ಕೋಟೆಕಾರ್‌ನಿಂದ ಲೋಕಲ್ ಸಮಿತಿ ಬಾಬು ಪಿಲಾರ್ ಅವರ ನೇತೃತ್ವದಲ್ಲಿ ,ಕೊಣಾeಯಿಂದ ಸಂಕಪ್ಪ ಕರ್ಕೇರ ಅವರ ನೇತೃತ್ವದಲ್ಲಿ ಜಾಗೃತಿ ಜಾಥಾ ನಡೆದು ಸಂಜೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಸಮಾರೋಪಗೊಂಡಿತು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಉಳ್ಳಾಲ ವಲಯ ಕಾರ್ಯದರ್ಶಿ ಕಷ್ಣಪ್ಪ ಸಾಲ್ಯಾನ್, ಸಿಪಿ‌ಐ‌ಎಂ ಜಿಲ್ಲಾ ಸಮಿತಿ ಸದಸ್ಯ ಜಯಂತ್ ನಾಯ್ಕ್ ಸೇರಿದಂತೆ ಸಿಪಿ‌ಐ‌ಎಂ ಮುಖಂಡರು ಉಪಸ್ಥಿತರಿದ್ದರು.

ವರದಿ: ಆರೀಪ್ ಕಲ್ಕಟ್ಟ ಉಳ್ಳಾಲ

Related posts

Leave a Reply