Breaking News

ಮೋದಿಯವರಿಗೆ ಸುಧಾರಣೆಗಿಂತ ರಾಜಕೀಯ ಲಾಭ ಮುಖ್ಯ, ನೋಟು ರದ್ದಿನಿಂದ ಕುಸಿದ ಜಿಡಿಪಿ-ವಿಶ್ವ ಬ್ಯಾಂಕ್

ಕಳೆದ ನವೆಂಬರ್ನಲ್ಲಿ ರೂ. 500 ಮತ್ತು ರೂ. 1,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದರಿಂದ ೨೦೧೬-೧೭ನೇ ಸಾಲಿನಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಸ್ವಲ್ಪ ಹಿಂಜರಿತ ಕಂಡಿದೆ ಎಂದು ವಿಶ್ವಬ್ಯಾಂಕ್ ಅಭಿವೃದ್ಧಿ ವರದಿ ಹೇಳಿದೆ.
ಶೇಕಡ ೭ರಷ್ಟು ಆರ್ಥಿಕ ಬೆಳವಣಿಗೆ ಆಗಬಹುದು ಎಂಬ ಅಂದಾಜು ಮಾಡಲಾಗಿತ್ತು. ಆದರೆ ಶೇಕಡ ೬.೮ಕ್ಕೆ ಇಳಿಯಬಹುದು ಎಂದು ವರದಿ ಹೇಳಿದೆ. ೨೦೧೭-೧೮ರ ಆರ್ಥಿಕಾಭಿವೃದ್ಧಿಯು ಶೇಕಡ ೭.೬ರಷ್ಟು ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಅದು ೭.೨ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇಲ್ಲ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ. ನೋಟು ರದ್ದು ನಿರ್ಧಾರದಿಂದ ನಗದು ಕೊರತೆ ಉಂಟಾಗಿ ಒಟ್ಟು ಆಂತರಿಕ ಉತ್ಪನ್ನದಲ್ಲಿ ಕೊರತೆ ಆಗಿದೆ ಎಂದು ವಿಶ್ವಬ್ಯಾಂಕ್ ನಿರ್ದೇಶಕ ಜುನೈದ್ ಅಹಮದ್ ತಿಳಿಸಿದ್ದಾರೆ.
ನೋಟು ರದ್ದತಿಯಿಂದ ಭ್ರಷ್ಟಾಚಾರ ನಿಂತಿಲ್ಲ. ಭ್ರಷ್ಟಾಚಾರವಷ್ಟೇ ಅಲ್ಲ ಇನ್ನಿತರ ಉದ್ದೇಶ ಈಡೇರಿಲ್ಲ ಎಂದು ಎಂದು ಫ್ರಾನ್ಸ್ ಅರ್ಥಶಾಸ್ತ್ರಜ್ಞ ಗೈ ಸೋರ್ಮನ್ ಅವರು ಹೇಳಿದ್ದಾರೆ. ಈ ನಿರ್ಧಾರದಿಂದ ವಾಣಿಜ್ಯ ವಹಿವಾಟಿಗೆ ತೊಂದರೆಯಾಯಿತೇ ಹೊರತು, ಭ್ರಷ್ಟಾಚಾರ ನಿಂತಿದೆಯೇ? ಎಂದು ಗೈ ಪ್ರಶ್ನಿಸಿದ್ದಾರೆ. ಮೋದಿ ಅವರಿಗೆ ದೇಶದ ಆರ್ಥಿಕ ಸ್ಥಿತಿ ಸುಧಾರಣೆಗಿಂತ ರಾಜಕೀಯ ಲಾಭ ಪಡೆಯುವಲ್ಲಿ ಹೆಚ್ಚು ಒಲವು ಕಾಣುತ್ತದೆ. ಹೂಡಿಕೆದಾರರ ದೇಶಿ ಮತ್ತು ವಿದೇಶಿ ವಿಶ್ವಾಸ ಕುಗ್ಗಿಸಿವೆ ಎಂದೂ ವಿಶ್ಲೇಷಿಸಿದ್ದಾರೆ.

Related posts

Leave a Reply