Header Ads
Breaking News

ಮೋದಿಯವರ ಜನ್ಮದಿನದ ಸೇವಾ ಸಪ್ತಾಹದ ಅಂಗವಾಗಿ ರಕ್ತದಾನ ಶಿಬಿರ ; ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಆಯೋಜನೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಸೇವಾ ಸಪ್ತಾಹದ ಅಂಗವಾಗಿ ಎ.ಜೆ. ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನಾ ಕಾರ್ಯಕ್ರಮ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.

ಅಭಿನಂದನೆ ಸ್ವಿಕರಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲು, ಸಾಮಾನ್ಯ ಕಾರ್ಯಕರ್ತ ನೊಬ್ಬನಿಗೆ ಅಧಿಕಾರ, ಅವಕಾಶ ಸಿಗುವುದಿದ್ದರೆ ಅದು ಬಿಜೆಪಿಯಲ್ಲಿ ಮಾತ್ತ ಸಾಧ್ಯ. ಯಾವುದೇ ಕೆಲಸವನ್ನು ಸೂಚನೆ ಕೊಟ್ಟು ಮಾಡುವುದಿಲ್ಲ, ಬದಲಾಗಿ ಆದರ್ಶವಾಗಿ ಮಾಡುತ್ತಾರೆ ಇದು ಬಿಜೆಪಿಯ ವೈಶಿಷ್ಟ್ಯ ಎಂದರು. ಯಾವ ವಿಚಾರದಾರೆಯಿಂದ ಪಕ್ಷ ಆರಂಭಗೊಂಡಿತೋ ಆ ವಿಚಾರಧಾರೆಯ ಬಗ್ಗೆ ಇಂದಿಗೂ ರಾಜಿ ಮಾಡಿಕೊಂಡಿಲ್ಲ. ಕಾರ್ಯ ಹಾಗೂ ಗುರಿಯನ್ನು ಸಾಧಿಸುವ ವಿಚಾರಧಾರೆ ಇಟ್ಟುಕೊಂಡು ಬಂದ ಪಕ್ಷ. ದೇಶವನ್ನು ಪರಿವರ್ತನೆ ಮಾಡಿ ಜಗದ್ಗುರು ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದೆ ಎಂದರು.
ಪಕ್ಷದಲ್ಲಿ ಕಾರ್ಯಕರ್ತನ ಕೆಲಸವನ್ನು ಗುರುತಿಸಿ ಜವಾಬ್ದಾರಿಯನ್ನು ಕೊಡ್ತಾರೆ, ಅದೇ ರೀತಿ ನನಗೂ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷಕ್ಕೆ ಚ್ಯುತಿ ಬಾರದ ನಿಟ್ಟಿನಲ್ಲಿ ಜವಾಬ್ದರಿ ನಿಭಾಯಿಸುತ್ತೇನೆ ಎಂದರು.
ಹಳ್ಳಿ ಹಳ್ಳಿಯಲ್ಲಿ ಪಕ್ಷ ಬಲವರ್ಧನೆಯಾಗ ಬೇಕಾಗಿದ್ದು ಮುಂದಿನ ಗ್ರಾ.ಪಂ. ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸ ಬೇಕು ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಮಾತನಾಡಿ ಸಾಮಾನ್ಯ ಕಾರ್ಯಕರ್ತನಿಗೆ ಪ್ರೇರಣೆ ನಿಡುವ ನಿಟ್ಟಿನಲ್ಲಿ ನೂತನ ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಲಾಗಿದೆ ಎಂದರು. ಪುತ್ತೂರು ಶಾಸಕ, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿ ಇಷ್ಟು ದಿನ ಆದರೂ ವಿರೋಧ ಪಕ್ಷದ ನಾಯಕರ ಆಯ್ಜೆಯಾಗಿಲ್ಲ ಅದರೂ ಸಿದ್ದರಾಮಯ್ಯ ಸರಕಾರ ಟೇಕ್ ಅಪ್ ಆಗಿಲ್ಲ ಎಂದು ಟೀಕಿಸುತ್ತಿದ್ದಾರೆ, ಬಿಜೆಪಿ ನಾಯಕರ ಮೇಲೆ ಗೂಬೆ ಕೂರಿಸುವ ಬದಲು ಭ್ರಷ್ಟಾಚಾರಿಗಳನ್ನು ಪಕ್ಷದಿಂದ ಕಿತ್ತೊಗಿಯಿರಿ ಎಂದು ಸವಾಲೆಸದರು. ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬ್ರಿಜೇಶ್ ಚೌಟ, ಕಿಶೋರ್ ರೈ, ಉದಯ ಕುಮಾರ್ ಶೆಟ್ಟಿ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ರಾಜ್ಯ ಸಹವಕ್ತಾರೆ ಸುಲೋಚನಾ ಭಟ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ತುಂಗಪ್ಪ ಬಂಗೇರಾ, ರವೀಂದ್ರ ಕಂಬಳಿ, ಜಿ.ಆನಂದ, ಎ.ಜೆ. ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ. ಅರವಿಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದಲ್ಲಿ 77 ಯುನಿಟ್ ರಕ್ತ ಸಂಗ್ರಹಿಸಲಾಯಿತು.

Related posts

Leave a Reply

Your email address will not be published. Required fields are marked *