Header Ads
Breaking News

ಮೋದಿ ಅಲೆಯ ಬಗ್ಗೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಹೇಳಿದ್ದೇನು ಗೊತ್ತೇ?

ಕಿನ್ನಿಗೋಳಿ: ಹಳ್ಳಿ ಹಳ್ಳಿಗಳಲ್ಲಿಯೂ ಇಂದು ಬಿಜೆಪಿ ಅಲೆ ಮೋದಿ ಅಲೆ ಬೀಸುತ್ತಿದೆ, ಎಲ್ಲಾ ಕಡೆಗಳಲ್ಲಿಯೂ ಇಂದು ಬಿಜೆಪಿ ಪರ ಜನ ಆಶೀರ್ವಾದಿಸಲು ತಯಾರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದರು ಅವರು ಕಿನ್ನಿಗೋಳಿಯ ರಾಜಾಂಗಣದಿಂದ ಮಾರುಕಟ್ಟೆ ತನಕ ಚುನಾವಣಾ ಜಾಥದಲ್ಲಿ ಪಾಲ್ಗೊಂಡು ನಂತರ ಮಾತನಾಡಿ ಈಗಗಲೇ ಜಿಲ್ಲೆಯಲ್ಲಿ ಮೂರು ಸುತ್ತಿನ ಪ್ರವಾಸ ಮುಗಿಸಿದ್ದೇವೆ, ಸಂಪೂರ್ಣವಾದ ಜನ ಬೆಂಬಲ ಕೂಡಾ ಇದೆ, ಈ ಬಾರಿ ಸುಮಾರು ಎರಡು ಲಕ್ಷ ಮತಗಳ ಅಂತರದಲ್ಲಿ ಜಯಗಳಿಸುತ್ತೇವೆ ಎಂಬ ವಿಶ್ವಾಸ ಇದೆ ಮೂಲ್ಕಿ ಮೂಡಬಿದ್ರೆಯಲ್ಲೂ ನಲುವತ್ತು ಸಾವಿರ ಮತಗಳ ಲೀಡ್ ಸಿಗಲಿದೆ, ಇಂದು ಎಲ್ಲಾ ಸರ್ವೆಗಳೂ ಬಿಜೆಪಿ ಪರ ಇದೆ, ಈ ಬಾರಿ ದೇಶದಲ್ಲಿ ೩೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದೇವೆ ಎಂದರು. ಮೂಲ್ಕಿ ಹೋಬಳಿಯ ಕೆ.ಎಸ್ ರಾವ್ ನಗರ, ಪುನರೂರು, ಏಳಿಂಜೆ, ಹಳೆಯಂಗಡಿ, ಕಿನ್ನಿಗೋಳಿ, ಸಸಿಹಿತ್ಲು ಮತ್ತಿತರ ಕಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ಸಂದರ್ಭ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *