Header Ads
Header Ads
Breaking News

ಮೋದಿ ಆಡಳಿತದಿಂದ ದೇಶ ದಿವಾಳಿಯಾಗುತ್ತಿದೆ: ವಿನಯ್ ರಾಜ್ ಆರೋಪ

ಕೇಂದ್ರ ಸರ್ಕಾರ ಆರ್.ಬಿ.ಐ.ಯನ್ನು ದುರ್ಬಲಗೊಳಿಸುವ ಹುನ್ನಾರ ಮಾಡುತ್ತಿದೆ. ನಾಲ್ಕುವರೆ ವರ್ಷದ ಮೋದಿ ಆಡಳಿತದಿಂದ ದೇಶ ದಿವಾಳಿಯಾಗುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ವಿನಯ್ ರಾಜ್ ಆರೋಪಿಸಿದರು.

ಇವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೊಷ್ಠಿ ನಡೆಸಿ ಮಾತನಾಡಿ ನಾಲ್ಕುವರೆ ವರ್ಷದಲ್ಲಿ ಮೋದಿ ದೇಶವನ್ನು ದಿವಾಳಿಮಾಡಿದ್ದಾರೆ. ದೇಶ ಆರ್ಥಿಕವಾಗಿ ದುರ್ಬಲಗೊಳ್ಳುತ್ತಿದೆ ಎಂದು ಸ್ವತ: ಆರ್.ಬಿ.ಐ.ಯೇ ಹೇಳುತ್ತಿದೆ ಇದ್ದರಿಂದಾಗಿ ದೇಶದಲ್ಲಿ ಅಗತ್ಯ ವಸ್ತು, ಪೆಟ್ರೋಲ್,ಡೀಸೆಲ್,ಮತ್ತು ಅಡುಗೆ ಅನಿಲ ಬೆಲೆ ಗಗನಕ್ಕೆ ಏರಿದೆ ಡಾಲರ್ ಎದುರು ರುಪಾಯಿ ಬೆಲೆ ಕುಸುತವಾಗಲು ಮೋದಿಯ ದುರಾಡಳಿತ ಕಾರಣ, ಕೇಂದ್ರ ಸರ್ಕಾರ ಆರ್..ಬಿ.ಐ.ಗೆ ಆರ್ಥಿಕ ತಜ್ಞರನ್ನು ನೇಮಕ ಮಾಡುವ ಬದಲು ಬಿಜೆಪಿ ಕಟ್ಟಾಳುಗಳನ್ನು ನೇಮಕಮಾಡಿ ಸಾಂವಿದಾನಿಕ ಸಂಸ್ಥೆಗಳಾಗಿರುವ ಸಿ.ಬಿ.ಐ, ಆರ್.ಬಿ.ಐ ಜಾರಿ ನಿರ್ದೆಶನಾಲಯ, ಇನ್ಕಂಟ್ಯಾಕ್ಸ್ ಅಥೋರಿಟಿ ಇವೆಲ್ಲದರ ಮೇಲೆ ಸರ್ವಾಧಿಕಾರ ದೋರಣೆ ಹೇರುತ್ತಿದೆ ಎಂದು ವಾಗ್ದಾಳಿ ನಡೆಸಿದರು ಸೇರುಸುತ್ತಿದೆ.

ಈ ಸಂದರ್ಭ ಜಿಲ್ಲಾ ಕಾಂಗ್ರಸ್‌ನ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಕಾರ್ಪೋರೇಟರ್ ಅಪ್ಪಿ, ಪ್ರದಾನ ಕಾರ್ಯದರ್ಶೀ ನೀರಜ್‌ಪಾಲ್, ಕಾಂಗ್ರೆಸ್ ವಕ್ತಾರರಾದ ಯು.ಹೆಚ್ ಖಾಲಿದ್, ನವನೀತ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply