Header Ads
Breaking News

ಮೋದಿ ಕೇರ್ ನಿಂದ ಆಜಾದಿ ಫೆಸ್ಟ್ ಕಾರ್ಯಕ್ರಮ

ಮಹಿಳೆಯರ ದಿನಾಚರಣೆಯನ್ನು ಅರ್ಥಪೂರ್ಣವನ್ನಾಗಿಸಿ ಆಚರಿಸುವ ಹಿನ್ನಲೆಯಲ್ಲಿ ಮೋದಿ ಕೇರ್ ನಿಂದ ಆಜಾದಿ ಫೆಸ್ಟ್ ಕಾರ್ಯಕ್ರಮ ಮಾರ್ಚ್ 7ರಂದು ಅಜ್ಜರಕಾಡುವಿನ ಪುರಭವನದಲ್ಲಿ ನಡೆಯಲಿದೆ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮೋದಿ ಕೇರ್‍ನ ಕ್ರೌನ್ ಡೈಮೆಂಡ್ ಡೈರೆಕ್ಟರ್. ಉದಯ ಶೆಟ್ಟಿ, ಮಾಹಿತಿ ನೀಡಿದರು. ನೇರ ಮಾರುಕಟ್ಟೆ ವ್ಯವಸ್ಥೆಯಡಿಯಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಕೋಟ್ಯಾಂತರ ಗ್ರಾಹಕರಿಗೆ ಉಜ್ವಲ ಭವಿಷ್ಯವನ್ನು ನೀಡಿ ಮೋದಿಕೇರ್ ತನ್ನದೇ ಆದ ಸ್ವದೇಶಿ ಉತ್ಪನ್ನಗಳ ಮೂಲಕ ಆರೋಗ್ಯಕರ ಬದುಕು ನಿರ್ಮಿಸಿಕೊಳ್ಳುವಲ್ಲಿ ನೆರವಾಗಿದೆ.ಕರಾವಳಿ ಭಾಗದಲ್ಲೂ ಅದೆಷ್ಟೋ ಮಹಿಳೆಯರು ಮೋದಿ ಕೇರ್ ಮೂಲಕ ಸ್ವ ಉದ್ಯೋಗ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ದರಿಂದ ಮೋದಿ ಕೇರ್ ಬಗ್ಗೆ ತಿಳಿಸಿಕೊಡುವ ಹಾಗೂ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ಇದಾಗಲಿದೆ ಈ ಮೂಲಕ ಮಹಿಳಾ ದಿನವನ್ನು ಅರ್ಥಪೂರ್ಣವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ರಾಘವೇಂದ್ರ ಶೆಟ್ಟಿ, ಶಶಿಧರ್ ಹೆಮ್ಮಣ್ಣ, ಜಹೀರ್ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *