Header Ads
Header Ads
Header Ads
Breaking News

ಮೋದಿ ಭಾರತವನ್ನೂ, ಪಿಣರಾಯಿ ಕೇರಳವನ್ನೂ, ಅಧೋಗತಿಗೆ ತಳ್ಳಿದರು. ಎಸ್.ಡಿ.ಪಿ.ಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ತುಂಬೆ

ಮಂಜೇಶ್ವರ: ಅಸಾಸ್ತ್ರೀಯವಾಗಿ ನೋಟನ್ನು ನಿರೋಧಿಸಿದ ಬಳಿಕ ಜಿ ಎಸ್ ಟಿ ಯನ್ನು ಜ್ಯಾರಿಗೊಳಿಸಿ ಭಾರತದ ಸದ್ದನ್ನು ಅಡಗಿಸಿದ ಮೋದಿ ಭಾರತದ ಎಲ್ಲಾ ವಲಯವನ್ನೂ ವಿನಾಶದತ್ತ ಕೊಂಡೊಯ್ದಿರುವುದಾಗಿ ಎಸ್ ಡಿ ಪಿ ಐ ರಾಷ್ಟ್ರೀಯ ಕಾರ್ಯದರ್ಶಿ ಇಲ್ಯಾಸ್ ತುಂಬೆ ಹೇಳಿದರು.

ಪಕ್ಷದ ಉಪಾಧ್ಯಕ್ಷ ತುಳಸೀಧರನ್ ಪಳ್ಳಿಕಾಪಿಲ್ ನಡೆಸುತ್ತಿರುವ ಉತ್ತರ ಕೇರಳದ ಬಹುಜನ ಯಾತ್ರೆಯ ಧ್ವಜವನ್ನು ಜಾಥಾ ಲೀಡರಿಗೆ ಹಸ್ತಾಂತರಿಸಿ ಅವರು ಮಾತನಾಡುತಿದ್ದರು. ಕೇರಳದಲ್ಲಿ ಪಿಣರಾಯಿ ವಿಜಯನ್ ಮೋದಿಯ ರೀತಿಯಲ್ಲಿ ಕ್ಕೇರಳವನ್ನು ನಾಶಗೈಯಲು ಹೊರಟಿರುವುದಾಗಿ ಅವರು ಹೇಳಿದರು. ಭಾರತದ ಉದ್ಯಮ ಕ್ಷೇತ್ರಕ್ಕೆ ಭಾರೀ ಹಿನ್ನಡೆ ಸಂಭವಿಸಿರುವುದಾಗಿಯೂ, ಸಣ್ಣ ಕೈಗಾರಿಕೋಧ್ಯಮ ಸಂಪೂರ್ಣವಾಗಿ ಸ್ಥಗಿತಗೊಂಡಿರುವುದಾಗಿಯೂ ಅವರು ಹೇಳಿದರು.

ಎಸ್.ಡಿ.ಪಿ.ಐ ಕಾಸರಗೋಡು ಜಿಲ್ಲಾಧ್ಯಕ್ಷ ಎನ್.ಯು ಅಬ್ದುಲ್ ಸಲಾಂ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ತುಳಸೀಧರನ್ ಪಳ್ಳಿಕ್ಕಲ್, ಉಪಸ್ತಿತರಿದ್ದರು.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply