Header Ads
Breaking News

ಮೋದಿ ಮತ್ತೆ ಪ್ರಧಾನಿಯಾಗುವುದನ್ನು ಜನತೆ ಬಯಸುತ್ತಿದ್ದಾರೆ : ಶಾಸಕ ಡಿ.ವೇದವ್ಯಾಸ್ ಕಾಮತ್

ಮಂಗಳೂರು ನಗರ ದಕ್ಷಿಣ ಮಂಡಲದ ಉತ್ತರ ಮಹಾಶಕ್ತಿ ಕೇಂದ್ರದಿಂದ ಮೈ ಭೀ ಚೌಕಿದಾರ್ ಜಾಥಾ ನಗರದಲ್ಲಿ ಜರುಗಿತ್ತು. ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಮಹಾದ್ವಾರದಿಂದ ಹೊರಟ ಜಾಥಾ ಅಳಕೆ, ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನ ಮುಂಭಾಗಕ್ಕೆ ತೆರಳಿ ಅಲ್ಲಿಂದ ಸೆಂಟ್ರಲ್ ಮಾರ್ಕೇಟ್ ತನಕ ಜಾಥಾ ಸಾಗಿತ್ತು. ಇನ್ನು ಚೌಕೀದಾರ್ ಜಾಥಾವನ್ನು ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇಶದಲ್ಲಿ ಭ್ರಷ್ಠಾಚಾರ ನಿರ್ಮೂಲನೆ ಮಾಡುವ ಮೋದಿ ಕನಸನ್ನು ಯಾರು ತಡೆಯಲು ಸಾಧ್ಯವಿಲ್ಲ, ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವುದನ್ನು ಈ ನಾಡಿನ ಜನತೆ ಬಯಸುತ್ತಿದ್ದಾರೆ ಎಂದು ತಿಳಿಸಿದರು.ಜಾಥಾದಲ್ಲಿ ಬಿಜೆಪಿ ಮುಖಂಡರಾದ ಪ್ರತಾಪ್ ಸಿಂಹನಾಯಕ್ , ಮಾಜಿ ಉಪಮೇಯರ್ ರಾಜೇಂದ್ರ, ಮಾಜಿ ಕಾರ್ಪೋರೇಟರ್ ಪೂರ್ಣಿಮಾ , ನರೇಶ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *