Header Ads
Breaking News

ಮೋದಿ ಮತ್ತೋಮ್ಮೆ ಪ್ರಧಾನಿಯಾಗಬೇಕೆಂದು ಶ್ರೀ ದುರ್ಗಾಲಕ್ಷ್ಮೀ ದೇವಸ್ಥಾನದಲ್ಲಿ ’ಚಂಡಿಕಾಯಾಗ’

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಮತ್ತೋಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ ಕುದ್ರೋಳಿಯ ಶ್ರೀ ದುರ್ಗಾಲಕ್ಷ್ಮೀ ದೇವಸ್ಥಾನದ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ದೇವಿಗೆ ’ಚಂಡಿಕಾಯಾ’ಗ ನಡೆಯಿತು.ಹೌದು ಮಂಗಳೂರಿನ ಕುದ್ರೋಳಿಯ ಕೊಪ್ಪಲದಲ್ಲಿರುವ ಶ್ರೀ ದುರ್ಗಾಲಕ್ಷ್ಮಿ ಹಾಗೂ ಶ್ರೀ ನಾಗ ಮತ್ತು ಪರಿವಾರ ದೈವಗಳ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಪ್ರಯುಕ್ತ ದೇರೆಬೈಲ್ ಬ್ರಹ್ಮ ಶ್ರೀ ವಿಠ್ಠಲದಾಸ ತಂತ್ರಿವರೇಣ್ಯರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಗಣಹೋಮ, ನಾಗಪೂಜೆ, ಪೂರ್ಣಾಹುತಿ, ಮಹಾಪೂಜೆ, ಮತ್ತು ವಿಶೇಷವಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿ ಚಂಡಿಕಾಯಾಗ ನಡೆಯಿತು.

ಈ ವೇಳೆ ದೇರೆಬೈಲ್ ಬ್ರಹ್ಮ ಶ್ರೀ ವಿಠ್ಠಲದಾಸ ತಂತ್ರಿಯವರು ಮಾತನಾಡಿ ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಸಮಾಜದ ಹಿತೈಶಿಗಳಾದ ನಾವೆಲ್ಲರು ಆ ದೇವಿಯನ್ನು ನೆನೆದುಕೊಂಡು ಮೋದಿಗಾಗಿ ಪ್ರಾರ್ಧನೆ ಮಾಡುತ್ತಿದ್ದೇವೆ, ಭಾರತಕ್ಕೆ ಉತ್ತಮ ನಾಯಕತ್ವದ ಅಗತ್ಯವಿದೆ ಅದ್ದರಿಂದ ಮೋದಿಯವರು ಅತ್ಯಧಿಕ ಬಹುಮತದಿಂದ ಜಯಗಳಿಸಬೇಕೆಂದು ದೇವಿಗೆ ಚಂಡಿಕಯಾಗ ಮಾಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭ ಶ್ರೀ ದುರ್ಗಾಲಕ್ಷ್ಮೀ ದೇವಸ್ಥಾನದ ಗೌರವ ಅಧ್ಯಕ್ಷರಾದ ಮನೋಹರ ಅಮೀನ್, ಆಡಳಿತ ಮೊಕ್ತೇಸರರಾದ ರಮಾನಾಥ ಸುವರ್ಣ, ನವೀನ್ ಸುವರ್ಣ,ಮನೋಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಈ ವೇಳೆ ನೂರಾರು ಭಕ್ತರು ಆಗಮಿಸಿ ದೇವಿಯ ಆಶಿರ್ವಾದ ಪಡೆದು ಅನ್ನ ಪ್ರಸಾದ ಸ್ವೀಕರಿಸಿ ಪುನೀತರಾದರು.

Related posts

Leave a Reply

Your email address will not be published. Required fields are marked *