Header Ads
Header Ads
Breaking News

ಮೋದಿ ವಿರುದ್ದ ಪೇಜಾವರ ಅಸಮಾಧಾನ

 

ಇಂದು ಪೇಜಾವರ ಮಠದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು ಮೋದಿ ಆಡಳಿತದ ಬಗ್ಗೆ ನಮಗೆ, ಜನರಿಗೆ ಭಾರೀ ನಿರೀಕ್ಷೆ ಇತ್ತು. ಅರ್ಥವ್ಯವಸ್ಥೆ ಸುಧಾರಣೆ ಸೇರಿದಂತೆ ಅನೇಕ ಕ್ರಮದ ಬಗ್ಗೆ ಮೆಚ್ಚುಗೆ ಇದೆ. ಆದ್ರೆ ರೈತರಿಗೆ, ಬಡವರಿಗೆ ಬೇಕಾಗುವ ಯೋಜನೆ ಸರಿಯಾಗಿ ರೂಪಿಸಿಲ್ಲ. ವಿದೇಶದಿಂದ ಕಪ್ಪು ಹಣ ಬರಲೇ ಇಲ್ಲ , ಕಪ್ಪು ಹಣವನ್ನು ಪ್ರಧಾನಿ ಮೋದಿ ತರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು ವಿಪಕ್ಷಗಳಲ್ಲಿ ಐಕ್ಯತೆ ಮೂಡಿದೆ ,ಈ ಹಿಂದೆ ಇಂದಿರಾ ಗಾಂಧಿಗೂ ಹೀಗೇ ಆಗಿತ್ತು ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಆಗಬಹುದು ಚುನಾವಣೆಗೂ ಮೊದಲು ಮೋದಿ ಕೆಲಸ ಮಾಡಿ ತೋರಿಸಬೇಕು ಅಂತ ಸಲಹೆ ನೀಡಿದರು.

ಸಿಎಂ ಕುಮಾರಸ್ವಾಮಿ ಅನುಭವಿ ರಾಜಕಾರಣಿ ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಅಂತ ಹಾರೈಸಿದ ಶ್ರೀಗಳು ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ಚದ ವಿಕೃತಿಯಾಗಿದೆ.ರಾಜಕಾರಣಿಗಳು ರೆಸಾರ್ಟ್, ಆಪರೇಷನ್ ನಲ್ಲಿ ತಲ್ಲೀನರಾಗಿದ್ದಾರೆ ಎಂದ ಅವರು, ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕೆಂಬ ಭಾವನೆ ಇದೆ. ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ. ಈ ಬಾರಿ ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ. ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಗೋವಿಂದ ಕಲ್ಯಾಣ ಮಂಟಪದಲ್ಲಿ ಸತ್ಕಾರ ಕೂಟ ಆಯೋಜಿಸುವ ಆಲೋಚನೆಯಿದೆ ಎಂದರು.

 

Related posts

Leave a Reply