Header Ads
Breaking News

ಮೋದಿ ಸಮಾವೇಶ ಮುಗಿಸಿ ಹೋಗುತ್ತಿದ್ದ ವೇಳೆ ಕಲ್ಲು ತೂರಾಟ

ಉಳ್ಳಾಲ: ಮೋದಿ ರ್‍ಯಾಲಿಯಿಂದ ವಾಪಸ್ಸಾಗುತ್ತಿದ್ದ ಕಾರು ಮತ್ತು ಬಸ್ಸಿಗೆ ಕಲ್ಲು ತೂರಾಟ ನಡೆದು ನಾಲ್ವರು ಗಾಯಗೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಮದನಿನಗರ ಸಮೀಪ ಶನಿವಾರ ಸಂಜೆ ವೇಳೆ ನಡೆದಿದ್ದು ಪೊಲೀಸರು ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆಯಲ್ಲಿ ಕುಂಪಲ ನಿವಾಸಿಗಳಾದ ಸುಜನ್ (24) ಮತ್ತು ನಾಹುಷ್ (21) , ಮದನಿ ನಗರ ನಿವಾಸಿ ಮಹಮ್ಮದ್ ಅಜ್ಮಲ್ ಹಾಗೂ ಉಳ್ಳಾಲದ ಸಂಶೀರ್(30) ಗಾಯಗೊಂಡವರು.
ಮದನಿನಗರ ಸಮೀಪ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತಕ್ಕೆ ಪ್ರತಿಯಾಗಿ ಕೇರಳ ನೋಂದಾಯಿತ ಕಾರಿನಲ್ಲಿ ಬಂದ ನಾಲ್ವರ ತಂಡ, ಅಪಘಾತವಾಗಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ಮೋದಿ ರ್‍ಯಾಲಿಯಿಂದ ವಾಪಸ್ಸಾಗುತ್ತಿದ್ದ ಬಸ್ ನಲ್ಲಿದ್ದ ಯುವಕರು ಗಲಾಟೆಯನ್ನು ಪ್ರಶ್ನಿಸಿದ್ದರು. ಈ ವೇಳೆ ಇತ್ತಂಡಗಳ ನಡುವೆ ಹೊಡೆದಾಟ ಸಂಭವಿಸಿ, ತಂಡವೊಂದು ಬಸ್ಸಿನೊಳಗಡೆ ಇದ್ದ ಮಹಿಳೆಯರ ಮೇಲೂ ಕೈ ಮಾಡಿದೆ. ಬಳಿಕ ಬಸ್ಸು, ಕಾರಿಗೆ ಕಲ್ಲು ತೂರಾಟ ನಡೆದು ಗಾಜು ಹಾನಿಗೈದಿದ್ದಾರೆ. ಘಟನೆಯಿಂದ ನಾಲ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೊಣಾಜೆ ಠಾಣೆಗೆ ಮುತ್ತಿಗೆ: ಕೃತ್ಯ ಖಂಡಿಸಿ ಸುಮಾರು 400 ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಇಬ್ಬರು ಶಾಸಕರು ಸೇರಿ ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿದರು. ಆರೋಪಿಗಳನ್ನೂ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು. ರಾತ್ರೋರಾತ್ರಿ ಏಳು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Related posts

Leave a Reply

Your email address will not be published. Required fields are marked *