Header Ads
Header Ads
Breaking News

ಮೋದಿ ಸರಕಾರ ಎಲ್ಲಾ ಕ್ಷೇತ್ರದಲ್ಲಿಯೂ ವಿಫಲ: ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಹೀದ್ ಆರೋಪ

ಸುಳ್ಯ : ಮೋದಿ ನೇತೃತ್ವದ ಕೇಂದ್ರ ಸರಕಾರ ಆಡಳಿತಕ್ಕೆ ಬಂದು ನಾಲ್ಕುವರೆ ಸನ್ನಿತವಾಗುತ್ತಿದ್ದು ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ದಿ ಸಾಧಿಸಲು ವಿಫಲವಾಗಿದೆ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಟಿ.ಎಂ.ಶಹೀದ್ ಆರೋಪ ಮಾಡಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಜನರಿಗೆ ಅಚ್ಚೆ ದಿನ್ ಬರುತ್ತದೆ ಎಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡಿದ್ದಾರೆ. ಕಾಂಗ್ರೆಸ್ ಸರಕಾರ ೬೦ ವರ್ಷದಲ್ಲಿ ಏನು ಮಾಡಿಲ್ಲ.

ನಾವು ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಹೇಳಿ ಅಧಿಕಾರ ಪಡೆಕೊಂಡರು. ಆದರೆ ಈ ತನಕ ಯಾವುದೇ ಒಳ್ಳೆ ಕೆಲಸ ಮಾಡಿಲ್ಲ. ರಾತೋರಾತ್ರಿ ಸಿ.ಬಿ.ಐ ಮುಖ್ಯಸ್ಥರನ್ನು ಅಮೀತ್ ಷಾ ಮತ್ತು ನರೇಂದ್ರ ಮೋದಿ ಬದಲಾಯಿಸುವ ಮೂಲಕ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ದಿನೆ ದಿನೆ ಪೆಟ್ರೋಲ್ ಡಿಸೇಲ್ ಬೆಲೆ ಏರುತ್ತಿದ್ದು ಜನ ಸಾಮಾನ್ಯರ ಜೀವನದಲ್ಲಿ ಮೋದಿ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ಅವರು ದೂರಿದರು.ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದೀಕ್ ಕೊಕ್ಕೋ, ಯುವ ಕಾಂಗ್ರೆಸ್ ಮುಖಂಡರಾದ ಶಾಫಿ ಕುತ್ತಮೊಟ್ಟೆ ಇತರರು ಉಪಸ್ಥಿತರಿದ್ದರು.

Related posts

Leave a Reply