Header Ads
Header Ads
Breaking News

ಮೋದಿ ಸರ್ಕಾರದ ಸಾಧನೆ ತೃಪ್ತಿ ತಂದಿದೆ:ಪುತ್ತೂರಿನಲ್ಲಿ ಪೇಜಾವರ ಶ್ರೀ ಪ್ರತಿಕ್ರಿಯೆ.

ಪುತ್ತೂರು: ಮೋದಿ ಸರಕಾರ ಸಾಧನೆ ತೃಪ್ತಿ ತಂದಿದೆ. ಎಲ್ಲವನ್ನೂ ನಾಲ್ಕು ವರ್ಷದಲ್ಲಿ ನೆರವೇರಿಸಲು ಸಾಧ್ಯವಿಲ್ಲ. ರಕ್ಷಣೆ, ಆರ್ಥಿಕತೆ ಸೇರಿದಂತೆ ಕೆಲವೊಂದು ವಲಯಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿದೆ ಎಂದು ಪುತ್ತೂರಿನಲ್ಲಿ ಉಡುಪಿ ಮಠದ ಪೇಜಾವರ ಶ್ರೀ ಹೇಳಿದರು.

ಅವರು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತೂರು ತಾಲೂಕಿನ ಕಾಣಿಯೂರು ಮಠಕ್ಕೆ ಪರ್ಯಾಯ ಪಲಿಮಾರು ಸ್ವಾಮೀಜಿಯೊಂದಿಗೆ ಭೇಟಿ ನೀಡಿ ಹಿಂದಿರುಗುವಾಗ ನರಿಮೊಗರಿನಲ್ಲಿರುವ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮನೆಗೆ ಭೇಟಿ ನೀಡಿಧ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಇನ್ನೊಂದು ಸಲ ಮೋದಿ ಸರಕಾರವನ್ನು ಆಯ್ಕೆ ಮಾಡುವುದು ಮತದಾರರಿಗೆ ಬಿಟ್ಟ ವಿಷಯ. ಈ ಹಿಂದೆ ವಾಜಪೇಯಿ ಕೂಡ ಉತ್ತಮ ಕೆಲಸ ಮಾಡಿದರೂ ಜನತೆ ಆಯ್ಕೆ ಮಾಡುವಲ್ಲಿ ಎಡವಿದರು ಎಂದರು.
ರಾಮಮಂದಿರ ಆಗಲೇ ಬೇಕು. ಅದು ನಿಶ್ಚಿಥ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು. ಕೇಂದ್ರ ಕಾನೂನು ತಜ್ಞರೊಂದಿಗೆ ಮಾತನಾಡಿ ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಎಂದರು. ಶಬರಿಮಲೆಯ ವಿಷಯದಲ್ಲಿ ನಾನು ತಟಸ್ಥ. ಧಾರ್ಮಿಕ ಭಾವನೆಗಳೊಂದಿಗೆ ಯಾರೂ ಆಟವಾಡಬಾರದು ಎಂದು ಪೇಜಾವರ ಶ್ರೀಗಳು ಹೇಳಿದರು.ಶಬರಿಮಲೆ ವಿಚಾರಕ್ಕರ ಪ್ರತಿಕ್ರಿಯೆ ನೀಡಿದ ಪೇಜಾವರ ಶ್ರೀಗಳು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಇಬ್ಬರು ಮಹಿಳೆಯರು ಪ್ರವೇಶ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಶಬರಿಮಲೆ ವಿವಾದದಲ್ಲಿ ತಟಸ್ಥ ಧೊರಣೆ ತಳೆದಿದ್ದೇವೆ. ಸಂಪ್ರದಾಯ ಉಳಿಯಬೇಕೆಂಬುದು ಕೂಡ ನಿಜ. ಆದರೆ ನಮ್ಮದು ಈ ವಿಚಾರದಲ್ಲಿ ತಟಸ್ಥ ನಿಲುವು. ಅನಾವಶ್ಯಕವಾಗಿ ಘರ್ಷಣೆಗೆ ಅವಕಾಶ ನೀಡಬಾರದು. ತಪ್ಪು ಯಾವುದು, ಸರಿ ಯಾವುದು ಬೇರೆ ವಿಷಯ. ಆದರೆ ಜನರಿಗೆ ಸಮಸ್ಯೆ ಆಗದಂತೆ ಸರಕಾರ ನೋಡಿಕೊಳ್ಳಬೇಕು ಎಂದು ನುಡಿದರು.

Related posts

Leave a Reply