Header Ads
Header Ads
Breaking News

ಮೋದಿ ಸರ್ಕಾರ ಪಾಕ್‌ಗೆ ತಕ್ಕ ಪಾಠ ಕಲಿಸುತ್ತದೆ: ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ಯೋಧರ ಮೇಲೆ ಉಗ್ರರ ದಾಳಿ ವಿಚಾರದಲ್ಲಿ ಮೋದಿ ಸರ್ಕಾರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ದೇಶದಾದ್ಯಂತ ರಾಷ್ಟ್ರ ಭಕ್ತರಿಂದ ಸಂತಾಪ ಸೂಚಿಸುವ ಕೆಲಸ ನಡಿಯುತ್ತಾ ಇದೆ. ಈ ನೋವು ದೇಶಾದ್ಯಂತ ಆತಂಕ ಸೃಷ್ಟಿಸಿದೆ. ಯೋಧರ ಒಂದೊಂದು ರಕ್ತಕೂ ಮೋದಿ ಪ್ರತೀಕಾರ ತೀರಿಸುತ್ತಾರೆ. ಮೋದಿ ಘೋಷಣೆಗೆ ಇಡೀ ಭಾರತ ಪ್ರಧಾನಿ ಜೊತೆ ಇದೆ. ಪಾಕಿಸ್ತಾನದ ಉಗ್ರರಿಗೆ ತಕ್ಕ ಶಾಸ್ತಿಯನ್ನು ಭಾರತ ಸರಕಾರ ಮಾಡುತ್ತೆ. ಎಲ್ಲಾರು ಒಟ್ಟಾಗಿ ಪಕ್ಷ ಭೇದ ಮರೆತು ಭಾರತಕ್ಕೆ ಬೆಂಬಲವನ್ನು ಮಾಡುತ್ತೇವೆ. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿಯನ್ನ ಮಾಡಿ ಭಾರತದಲ್ಲಿ ಶಾಂತಿಯನ್ನು ಪ್ರಧಾನಿ ರೂಪಿಸುತ್ತಾರೆ ಎಂದು ಕೋಟ ಶ್ರೀ ನಿವಾಸ್ ಪೂಜಾರಿ ಹೇಳಿಕೆ ನೀಡಿದರು.

Related posts

Leave a Reply

Your email address will not be published. Required fields are marked *