Header Ads
Header Ads
Breaking News

ವಿಜಯಾ ಬ್ಯಾಂಕ್ ವಿಲೀನ ವಿಚಾರ: ರಮಾನಾಥ ರೈ ಆಕ್ರೋಶ

ಕೇಂದ್ರ ಸರ್ಕಾರ ವಿಜಯಾ ಬ್ಯಾಂಕ್‌ನ್ನು ವಿಲೀನ ಮಾಡಲು ಹೊರಟಿರುವುದು ಖೇದಕರ ಸಂಗತಿ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಅವರು ಹೇಳಿದರು.ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, 87 ವರ್ಷ ಇತಿಹಾಸವುಳ್ಳ ವಿಜಯಾ ಬ್ಯಾಂಕನ್ನು ನಷ್ಟದಲ್ಲಿರುವ ದೇನಾ, ಬರೋಡಾ ಜೊತೆ ವಿಲೀನ ಮಾಡುತ್ತಿದೆ. ಮಂಗಳೂರಿನಲ್ಲಿ ಎ.ಬಿ ಶೆಟ್ಟಿ ಅವರು ಸ್ಥಾಪಿಸಿದ ವಿಜಯಾ ಬ್ಯಾಂಕ್ ದೇಶದಾದ್ಯಂತ ಶಾಖೆಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಹೆಮ್ಮೆಯಾಗಿರುವ ಬ್ಯಾಂಕನ್ನು ಇಲ್ಲವಾಗಿಸುವ ಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು 2 ಲಕ್ಷ ರೂಪಾಯಿ ಸಾಲಮನ್ನಾ ಮಾಡಿ ಉದ್ಯಮಿಗಳ ಪರ ನಿಂತಿದ್ದಾರೆ ಎಂದ ಅವರು, ವಿಜಯಾ ಬ್ಯಾಂಕನ್ನು ವಿಲೀನ ಮಾಡುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.ಈ ಸಂದರ್ಭ ಮಾಧ್ಯಮಗೋಷ್ಠಿಯಲ್ಲಿ ಮಂಗಳೂರು ಪಾಲಿಕೆಯ ಮೇಯರ್ ಭಾಸ್ಕರ್ ಮೊಯ್ಲಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply