Header Ads
Header Ads
Header Ads
Breaking News

ಯಕ್ಷಗಾನದಲ್ಲಿ ಚುಂಬನ ಪ್ರಸಂಗ ಚರ್ಚೆಗೆ ಗ್ರಾಸವಾದ ಲಿಪ್‌ಲಾಕ್ ಯಕ್ಷಗಾನ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್

ಮಂಗಳೂರು: ಆರಾಧನಾ ಸೇವೆ ಮತ್ತು ಹರಕೆ ಸಂಸ್ಕೃತಿಯ ಜೊತೆ ಮಿಲಿತಗೊಂಡಿರುವ ಯಕ್ಷಗಾನ ತನ್ನದೇ ಆದ ಪ್ರಾಮುಖ್ಯತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಸದ್ಯ ಸಾಮಾಜಿಕ ತಾಣಗಳಲ್ಲಿ ಹರಿದಾಡು ತ್ತಿರುವ ವೀಡಿಯೊವೊಂದು ಯಕ್ಷ ಗಾನಕ್ಕೂ ಅಶ್ಲೀಲತೆಯ ಸ್ಪರ್ಶ ಸಿಕ್ಕಿದೆಯಾ ಎಂಬ ಚರ್ಚೆಗೆ ವೇದಿಕೆ ಹುಟ್ಟುಹಾಕಿದೆ. ಯಕ್ಷಗಾನವೊಂದರ ಶೃಂಗಾರ ಸನ್ನಿವೇಶದಲ್ಲಿ ಸಿನಿಮಾ ಶೈಲಿಯ ‘ಲಿಪ್ ಲಾಕ್’ ಪ್ರೇಕ್ಷಕರಿಗೆ ತೀವ್ರ ಮುಜುಗರ ಉಂಟು ಮಾಡಿ ದ್ದಲ್ಲದೆ, ಇದೀಗ ಆ ವಿಡಿಯೋ ವೈರಲ್ ಆಗಿದೆ.

ಸದ್ಯ ಈ ವೀಡಿಯೋಗೆ ಸಂಬಂಧಿಸಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದ್ದು, ಹಲವರು ಈ ದೃಶ್ಯದ ಬಗ್ಗೆ ಅಸಮಾ ಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಹತ್ತಾರು ಶತಮಾನಗಳಿಂದ ಇಂದಿನ ವರೆಗೂ ಕಟೀಲು, ಧರ್ಮಸ್ಥಳ ಮೊದ ಲಾದ ಮೇಳಗಳು ಹರಕೆಯ ರೂಪ ದಲ್ಲಿಯೇ ಯಕ್ಷಗಾನವನ್ನು ನಡೆಸಿ ಕೊಂಡು ಬಂದಿದೆ.ಹೀಗಿರುವಾಗಲೇ ಆಧುನಿಕತೆಗನುಗುಣವಾಗಿ ಹಾಡುಗಾರಿಕೆಯ ಶೈಲಿ, ಕುಣಿ ತದ ನಡೆ ಗಳು ಬದಲಾವಣೆಯಾಗಿದೆ. ಆದರೆ ಇಷ್ಟರವರೆಗೆ ಅಶ್ಲೀಲತೆ ಯಕ್ಷಗಾನದ ರಂಗದಲ್ಲಿ ಕಾಣು ತ್ತಿರಲಿಲ್ಲ ಎನ್ನುವುದು ಯಕ್ಷಪ್ರಿಯರ ವಾದ. ಹೀಗಿರುವಾಗಲೇ ಇಂದು ಅವೆಲ್ಲವನ್ನೂ ಮೀರಿ ಒಂದು ಹೆಜ್ಜೆ ಮುಂದುವರಿದು ‘ಲಿಪ್‌ಲಾಕ್’ ಸಂಸ್ಕೃತಿಯನ್ನು ಯಕ್ಷಗಾನದಲ್ಲಿ ಅಳವಡಿಸಿ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎನ್ನುವ ಗಂಭೀರ ಆರೋಪ ಯಕ್ಷ ಪ್ರಿಯರದ್ದು. ಕಳೆದ ಕೆಲದಿನದ ಹಿಂದೆ ನಡೆದ ಯಕ್ಷಗಾನ ಒಂದರ ಶೃಂಗಾರ ಸನ್ನಿವೇಶದಲ್ಲಿ ಸಿನಿಮಾ ಶೈಲಿಯ ‘ಲಿಪ್ ಲಾಕ್’ ಪ್ರೇಕ್ಷಕರಿಗೆ ತೀವ್ರ ಮುಜುಗರ ಉಂಟು ಮಾಡಿದ್ದಲ್ಲದೇ ಇದೀಗ ಆ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಫೇಸ್‌ಬುಕ್, ವಾಟ್ಸ್‌ಅಪ್‌ಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

Related posts

Leave a Reply