Header Ads
Header Ads
Breaking News

ಯಕ್ಷಗಾನದ ಚಾರ್ಲಿಚಾಪ್ಲಿನ್ ಸೀತಾರಾಮಕುಮಾರ್ ಕಟೀಲ್‍ರಿಗೆ ರಾಜ್ಯೋತ್ಸವ ಪ್ರಶಸ್ತಿ

ಕಿನ್ನಿಗೋಳಿ: ಯಕ್ಷರಂಗದಲ್ಲಿ ಸೇವೆಗೈಯುತ್ತಿರುವ ಸೀತಾರಾಮಕುಮಾರ್ ಕಟೀಲ್ ಈ ಬಾರಿಯ ರಾಜೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ ಕೆಲವು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೀತಾರಾಮ ಕುಮಾರ್ ಕಟೀಲ್ ಯಕ್ಷರಂಗದ ಅದ್ಭುತ ಹಾಸ್ಯಗಾರ, ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಣೆಯನ್ನು ಹೊಂದಿದವರು. ಮುಂಬಯಿಗೆ ಹೋಗಿ ನಾರಾಯಣಗುರು ಯಕ್ಷಗಾನ ಮಂಡಳಿಯಲ್ಲಿ ತರಬೇತಿ ಪಡೆದು ಕಲಾವಿದರಾಗಿ ಸೇವೆ ಸಲ್ಲಿಸಿದರು, ಸೀತಾರಾಮ ಕುಮಾರ್ ಕಟೀಲ್ ನಾರಾಯಣಗುರು ಯಕ್ಷಗಾನ ಮಂಡಳಿ ಮುಂಬೈ, ಕದ್ರಿ ಮಂಜುನಾಥ ಸ್ವಾಮಿ ಯಕ್ಷಗಾನ ಮಂಡಳಿ, ಮಂಗಳಾದೇವಿ ಮಂಗಳೂರು, ಕಾಸರಗೋಡು, ಮಹಾಲಿಂಗೇಶ್ವರ ಮೇಳ ಪುತ್ತೂರು ಸಾಲಿಗ್ರಾಮ ಮೇಳ ಕುಂದಾಪುರ ಅನಂತಪದ್ಮನಾಭ ಪೆರ್ಡೂರು, ರಾಮಚಂದ್ರಾಪುರ ಹೊಸನಗರ ಮತ್ತಿತರರ ಮೇಳಗಳಲ್ಲಿ 50 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಉಭಯ ತಿಟ್ಟುಗಳಲ್ಲಿ ಕಾಲ್ಪನಿಕ ಮಾತ್ರವಲ್ಲದೆ ಪೌರಾಣಿಕ ಪ್ರಸಂಗಳಲ್ಲಿ ಸಾವಿರಾರು ಪ್ರದರ್ಶನ ನೀಡಿದ್ದಾರೆ, ಸೀತಾರಾಮಕುಮಾರ್ ಅವರಿಗೆ ಮದ್ರೆಂಗಿ ಮದ್ಮಲ್ ಪ್ರಸಂಗದ ಹೆಡ್ಡ ಜನ್ನಮಾಣಿ , ಸಾಕಷ್ಟು ಪ್ರಸಿದ್ದಿಯನ್ನು ತಂದು ಕೊಟ್ಟರೆ , ವಿಜಯ, ಮಕರಂದ, ಮಾಲಿನಿದೂತ, ನಂದಿಶೆಟ್ಟಿ, ಕಾಶಿಮಾಣಿ, ವೃದ್ಧಬ್ರಾಹ್ಮಣ, ಮತ್ತಿತರ ಪಾತ್ರಗಳು ಹೆಸರುಗಳಿಸಿದವು, ಇವರ ಸೇವೆಯನ್ನು ಗುರುತಿಸಿ ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಅಖಿಲಭಾರತ ಸಾಹಿತ್ಯ ಪ್ರಶಸ್ತಿ, ಶುಭಸೌರಭ ಪ್ರಶಸ್ತಿ , ವಿಶ್ವಕನ್ನಡ ಕಣ್ಮಣಿ ಪ್ರಶಸ್ತಿ , ತುಳುನಾಡ ಸಿರಿ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ಉಡುಪಿ ವೀರವಿಠಲ ಪ್ರಶಸ್ತಿ, ಪುತ್ತಿಗೆ ಶ್ರೀಗಳಿಂದ ರಾಜಾಂಗಣ ವಿದೂಷಕ ಪ್ರಶಸ್ತಿ, ಮಾಣಿಲ ಶ್ರೀಗಳಿಂದ ಸರ್ವಜ್ಞ ಪ್ರಶಸ್ತಿ, ಗುರುಪುರ ವಜೃದೇಹಿ ಶ್ರೀಗಳೀಂದ ಕಲಾ ಕೇಸರಿ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಅಂತರಾಷ್ಟೀಯ ಆರ್ಯಭಟ ಪ್ರಶಸ್ತಿ, ಬಸವಣ್ಣನವರ ಕಾಯಕರತ್ನ ಮತ್ತಿತರ ಪ್ರಶಸ್ತಿಗಳು ಲಭಿಸಿದ್ದು ಮಾತ್ರವಲ್ಲದೆ, ಅಬುದಾಭಿ, ಒಮನ್, ಬಹ್ರೈನ್, ದುಬೈ, ದೋಹರ್ ಕುವೈಟ್ ಮತ್ತಿತರ ಕಡೆಗಳಲ್ಲಿ ನೂರಾರು ಸನ್ಮಾನಗಳು ನಡೆದಿದೆ.

Related posts

Leave a Reply