Header Ads
Header Ads
Header Ads
Breaking News

ಯಕ್ಷಗಾನ ಒಂದು ಶಾಸ್ತ್ರ:ಕುಂಜಾರಗಿರಿಯಲ್ಲಿ ವಿದ್ವಾನ್ ಪಂಜ ಭಾಸ್ಕರ್ ಭಟ್ ಅಭಿಪ್ರಾಯ

ಯಕ್ಷಗಾನ ಎಂಬುದು ಒಂದು ಶಾಸ್ತ್ರ ಅಂತಹ ಯಕ್ಷಗಾನದ ಸೇವೆ ಮಾಡುವ ಗಣೇಶ್ ಕೊಲಕಾಡಿಯವರು ಅಭಿನಂದನಾರ್ಹರು ಎಂದು ವಿದ್ವಾನ್ ಪಂಜ ಬಾಸ್ಕರ ಭಟ್ ಹೇಳಿದರು.

ಅವರು ಕುಂಜಾರಗಿರಿ ಶಾಸ್ತಾವು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆದ ಕವಿ, ಯಕ್ಷಗುರು ಗಣೇಶ್ ಕೊಲಕಾಡಿಯವರ ಅಭಿನಂದನಾ ಸಮಾರಂಭ ಕೊಲೆಕಾಡಿ ಯಕ್ಷವೈಭವ ಕಾರ್ಯಕ್ರಮದಲ್ಲಿ ಆಶೀರ್ವಾಚನ ನೀಡಿ ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಕೊಲೆಕಾಡಿಯವರು ಯಕ್ಷಗಾನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು, ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಕೊಲಕಾಡಿಯವರು ಅಲ್ಪ ಸಮಯದಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ, ಅನಾರೋಗ್ಯದಲ್ಲಿದ್ದರೂ ಯಕ್ಷಗಾನದ ಸೇವೆಯನ್ನು ಕೈಬಿಟ್ಟವರಲ್ಲ, ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಕೊಲೆಕಾಡಿಯವರು ಛಂದಸ್ಸಿನ ಮೇಲೆ ಹಿಡಿತ ಸಾಧಿಸಿದ್ದು ಶಾಘ್ಲನೀಯ ಎಂದರು. ಡಾ. ಎನ್ ನಾರಾಯಣ ಶೆಟ್ಟಿ ಶಿಮಂತೂರು ಕಾರ್ಯಕ್ರಮವನ್ನು ಉದ್ಘಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಪ್ರಥ್ವಿರಾಜ ಕವಾತ್ತಾರು ಪ್ರಸ್ತಾವನೆಗೈದರು, ಈ ಸಂದರ್ಭ ಮೂಲ್ಕಿ ವಿಜಯ ರೈತ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ , ಮೂಲ್ಕಿ ವಿಜಯಾ ಕಾಲೇಜಿನ ನಿವೃತ್ತ ಪ್ರಾಶುಂಪಾಲ ನಾರಾಯಣ ಶೆಟ್ಟಿಗಾರ್, ಇನ್ಪೋಸಿನ ಹರೀಶ್ ಕೊಲೆಕಾಡಿ, ಹರಿದಾಸ ನಾರ್ಣಪ್ಪಯ್ಯ ಸ್ಮಾರಕ ಕಲಾ ಪೂಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಕೆ. ಭುವನಾಭಿರಾಮ ಉಡುಪ, ಗಂಗಾಧರ ವಿ ಶೆಟ್ಟಿ ಬರ್ಕೆ ತೋಟ ಕೊಲೆಕಾಡಿ, ಮತ್ತಿತರರು ಉಪಸ್ಥಿತರಿದ್ದರು.

ನಿಶಾಂತ್ ಶೆಟ್ಟಿ ಕಿಲೆಂಜೂರು

Related posts

Leave a Reply