
ಬಂಟ್ವಾಳ: ಯಕ್ಷಗಾನ ಕಲೆ ತುಳುನಾಡಿನ ಕೊಡುಗೆಯಾಗಿದೆ ಎಂದು ನಿವೃತ್ತ ಶಿಕ್ಷಕ ವಿದ್ವಾನ್ ಕೆ.ಲಕ್ಷ್ಮೀ ನಾರಾಯಣ ಆಚಾರ್ಯ ಅವರು ಹೇಳಿದರು.
ಅವರು ಬಂಟ್ವಾಳ ತಾ. ಕಾವಳಪಡೂರು ಗ್ರಾಮದ ಮಧ್ವ ಯಕ್ಷ ಕೂಟದ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ಮಧ್ವಾಚಾರ್ಯರು ಯಕ್ಷಗಾನ ಕಲೆಯ ಬೀಜವನ್ನು ಬಿತ್ತಿದವರು. ಬಳಿಕ ಪಾರ್ತಿ ಸುಬ್ಬನಿಂದ ಪೋಷಿಸಲ್ಪಟ್ಟಿದ್ದರಿಂದ ಯಕ್ಷಗಾನ ಕಲೆ ತುಳುನಾಡಿನ ಹೆಮ್ಮೆಯ ಕೊಡುಗೆಯಾಗಿದ್ದು, ಇದನ್ನು ಬೆಳೆಸಿ, ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಹಿರಿದಾಗಿದೆ ಎಂದರು.
ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಶುಭಹಾರೈಸಿದರು. ಕಾವಳಪಡೂರು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಹಿರಿಯ ಯಕ್ಷಗಾನ ಅರ್ಥದಾರಿ ಡಿ.ತಿಮ್ಮಪ್ಪ ಶೆಟ್ಟಿ ಪಾತಿಲ, ಶಿರಡಿ ಉದ್ಯಮಿ ಲೋಕನಾಥ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.