Header Ads
Header Ads
Header Ads
Breaking News

ಯಕ್ಷಗಾನ ದಂತಕಥೆ ಚಿಟ್ಟಾಣಿ ಇನ್ನಿಲ್ಲ ನೂರಾರು ಅಭಿಮಾನಿಗಳಿಂದ ಅಂತಿಮ ನಮನ ಹೊನ್ನಾವರದ ಗುಡೇಕೇರಿಯಲ್ಲಿ ನಡೆಯಲಿದೆ ಅಂತ್ಯಸಂಸ್ಕಾರ

 

ಇವರು ಯಕ್ಷಗಾನ ಲೋಕದ ಮೇರು ಕಲಾವಿದ. ಇವರು ರಂಗಪ್ರವೇಶಿಸಿದ್ರೆ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ. ರಾಕ್ಷಸನ ಪಾತ್ರ ಹಾಕಿದ್ದರಂತೂ ನಿಜವಾದ ಖಳ ನಟ ಬಂದ ಹಾಗೆ ಆಗುತ್ತೆ. ಈ ಕಲಾವಿದ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇವರ ಅಮೋಘ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇವರು ಯಾರು..ಇವರ ಸಾಧನೆ ಏನು? 

ಇವರ ಹೆಸರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಇವರು ಚಿಟ್ಟಾಣಿ ಅಂತಾನೇ ಫೆಮಸ್ಸು…೧೯೩೩ರ ಜನವರಿ ೧ರಂದು ಉತ್ತರ ಕನ್ನಡದ ಹೊನ್ನಾವರದಲ್ಲಿ ಸುಭ್ರಾಯ ಹೆಗಡೆ, ಗಣಪಿ ಹೆಗಡೆ ದಂಪತಿಯ ಪುತ್ರನಾಗಿ ಜನಿಸಿದ ಚಿಟ್ಟಾಣಿ ಸುಮಾರು ೭೦ ವರ್ಷಗಳ ಕಾಲ ಯಕ್ಷಗಾನ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ್ದಲ್ಲದೇ ಪ್ರೇಕ್ಷಕರನ್ನು ರಂಗದತ್ತ ಸೆಳೆದ ಅಪರೂಪದ ಕಲಾವಿದ .ಒಂದು ವಾರದ ಹಿಂದೆಯಷ್ಟೇ ಹೊನ್ನಾವರ ಸಮೀಪ ಬಂಗಾರಮಕ್ಕಿ ಯಲ್ಲಿ ನವರಾತ್ರಿ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನದಲ್ಲಿ ಶಂತನು ಪಾತ್ರ ನಿರ್ವಹಿಸಿದ್ದು ಇವರ ಕೊನೆಯ ಯಕ್ಷಗಾನ ಪ್ರದರ್ಶನವಾಗಿದೆ. ಬಳಿಕ ತೀವ್ರ ಜ್ವರದ ಕಾರಣ ಅವರನ್ನು ೪ ದಿನಗಳ ಹಿಂದೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಟ್ಟಾಣಿಯವರು ನ್ಯುಮೋನಿಯ ಸಂಬಂಧಿ ಹಾಗೂ ಉಸಿರಾಟದ ತೊಂದರೆಯಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ್ದು , ಮೂವರು ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಚಿಟ್ಟಾಣಿಯವರ ಕೊನೆಯ ಆಸೆಯಂತೆ ಕಣ್ಣು ದಾನ ನಡೆದಿದೆ.

ಕೀಚಕ, ಕೌರವ, ದುಷ್ಟಬುದ್ದಿ, ಭಸ್ಮಾಸುರ ಮೊದಲಾದ ಖಳ ನಾಯಕನ ಪಾತ್ರ ಮಾಡುತ್ತಿದ್ದ ಚಿಟ್ಟಾಣಿ ನೋಡುಗರಲ್ಲಿ ಮಿಂಚಿನ ಸಂಚಾರ ಮೂಡಿಸುತ್ತಿದ್ದರು. ಇವರ ಅಪಾರ ಸಾಧನೆಗೆ ೨೦೧೨ರಲ್ಲಿ ಪದ್ಮಶ್ರೀ ಪ್ರಶಸ್ತಿ ಸಂದಿತು. ಉಳಿದಂತೆ ೧೯೯೧ರಲ್ಲಿ ರಾಜ್ಯೋತ್ಸವ ಪ್ರಶಸ್ತಿ,೨೦೦೪ರಲ್ಲಿ ಜನಪದಶ್ರೀ ಪ್ರಶಸ್ತಿ, ೨೦೧೩ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಯನ್ನು ಪಡೆದಿದ್ದರು.ಚಿಟ್ಟಾಣಿಯವರ ಭಾವಾಭಿನಯವನ್ನು ಕಂಡು ಡಾ. ರಾಜ್ ಕುಮಾರ್ ಅವರು ಸಹಾ ಸಭಾಷ್ ಗಿರಿ ನೀಡಿದ್ದರು. ಸುಮಾರು ೭ ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಕೊಡುಗೆ. ಇದೀಗ ಯಕ್ಷಗಾನ ಲೋಕಕ್ಕೆ ಚಿಟ್ಟಾಣಿಯವರ ನಿಧನ ತುಂಬಲಾರದ ನಷ್ಟವಾಗಿದೆ. ಉಡುಪಿಯಲ್ಲಿ ಇಂದು ಅಪಾರ ಅಭಿಮಾನಿಗಳು , ಗಣ್ಯರು ಚಿಟ್ಟಾಣಿಯವರ ಅಂತಿಮ ದರ್ಶನ ಪಡೆದರು. ಹೊನ್ನಾವರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಒಟ್ಟಿನಲ್ಲಿ ಯಕ್ಷಗಾನಕ್ಕೆ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ತಂದುಕೊಟ್ಟ ಚಿಟ್ತಾಣಿ ಎಲ್ಲರನ್ನು ಅಗಲಿದ್ದಾರೆ.ಯಕ್ಷ ಲೋಕದ ಖಳ ನಾಯಕನೆಂದೇ ಪ್ರಸಿದ್ದಿಯಾಗಿರುವ ಚಿಟ್ಟಾಣಿಯರ ಸ್ಥಾನವನ್ನು ಎಂದೂ ಯಾರಿಂದಲೂ ತುಂಬಲು ಸಾಧ್ಯವಿಲ್ಲ.ಇದು ಯಕ್ಷಗಾನ ಕಲಾವಿದ, ಅಭಿಮಾನಿಗಳ ಅನಿಸಿಕೆ. ಚಿಟ್ಟಾನಿಯವರ ಕಲಾ ಪ್ರತಿಬೆ ಎಲ್ಲರೂ ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Related posts

Leave a Reply