Header Ads
Header Ads
Breaking News

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕ ಉದ್ಘಾಟನೆ ವಿಟ್ಲ ಪಂಚಲಿಂಗೇಶ್ವರ ದೇವಳದ ಆವರಣದಲ್ಲಿ ಕಾರ್ಯಕ್ರಮ

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಗಾನ ನಡೆಯಿತು.ಇದೇ ಸಂದರ್ಭದಲ್ಲಿ ವಿಟ್ಲ ಫೌಂಡೇಶನ್ ವತಿಯಿಂದ ಸತೀಶ್ ಶೆಟ್ಟಿ ಪಟ್ಲ ಹಾಗೂ ಯುವ ಭಾಗವತ ಪ್ರಖ್ಯಾತ್ ಶೆಟ್ಟಿ ಅಳಿಕೆ ಅವರನ್ನು ಸನ್ಮಾನಿಸಲಾಯಿತು. ಮಾನಿಷಾದ ಯಕ್ಷಗಾನ ಬಯಲಾಟ ನಡೆಯಿತು. ವಿಟ್ಲ ಘಟಕವನ್ನು ಹಾವೇರಿ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಉದ್ಘಾಟಿಸಿದರು.

ಈ ಸಂದರ್ಭ ಆಶೀರ್ವಚನ ನೀಡಿದ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಕಲೆಯನ್ನೇ ಸರ್ವಸ್ವವೆಂದು ನಂಬಿಕೊಂಡ ಕಲಾವಿದರಿಗೆ ಕಲೆಯೇ ಭೂಷಣ ಮತ್ತು ಸಂರಕ್ಷಣೆಯಾಗಿದೆ. ಯಕ್ಷಗಾನ ಕ್ಷೇತ್ರ ಅಶಕ್ತ ಕಲಾವಿದರಿಗೆ, ಕಲೆಯೊಂದಿಗೆ ಬದುಕುವವರಿಗೆ ಯಕ್ಷಧ್ರುವ ಫೌಂಡೇಶನ್ ಹೊಸ ದಿಕ್ಕು ತೋರಿಸಿದೆ ಎಂದು ತಿಳಿಸಿದರು.ವಿಟ್ಲ ಯಕ್ಷಧ್ರುವ ಫೌಂಡೇಶನ್ ಅಧ್ಯಕ್ಷ ಸತೀಶ್ ಕುಮಾರ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಲ ಫೌಂಡೇಶನ್ ಘಟಕ ದೇಶ ವಿದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದೆ. ಇದೀಗ ವಿಟ್ಲದಲ್ಲಿ ಘಟಕವನ್ನು ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲಗುತ್ತು, ಯಕ್ಷಧ್ರುವ ಫೌಂಡೇಶನ್ ಪ್ರಧಾನ ಕಾರ್‍ಯದರ್ಶಿ ಪುರುಷೋತ್ತಮ ಭಂಡಾರಿ ಕೆ., ಯಕ್ಷಧ್ರುವ ಫೌಂಡೇಶನ್ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಕೋಲ್ಪೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ ಆಡಳಿತ ಮುಕ್ತೇಸರ ರಾಜರಾಮ ಶೆಟ್ಟಿ ಕೋಲ್ಪೆಗುತ್ತು, ಕೃಷಿಕ ಸುಂದರ ಶೆಟ್ಟಿ, ಉದ್ಯಮಿಗಳಾದ ರಾಜಾರಾಮ್ ಭಟ್ ಬಲಿಪಗುಳಿ, ಸದಾಶಿವ ಆಚಾರ್‍ಯ, ಸುಬ್ರಾಯ ಪೈ, ಕೃಷ್ಣಯ್ಯ ಕೆ.ವಿಟ್ಲ ಅರಮನೆ, ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಪಟ್ಲಗುತ್ತು ಮಹಾಬಲ ಶೆಟ್ಟಿ, ಡಾ. ಮನು ರಾವ್, ಮಂಗಳೂರು ಘಟಕದ ಪ್ರದೀಪ್ ಆಳ್ವ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ. ವಿಟ್ಲ, ಮಾಧವ ಮಾವೆ, ರಾಧಾಕೃಷ್ಣ ಆಳ್ವ ಚೆಲ್ಲಡ್ಕ, ನಟೇಶ್ ವಿಟ್ಲ ಭಾಗವಹಿಸಿದ್ದರು.