Header Ads
Header Ads
Breaking News

ಯಶಸ್ವೀ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ : ಕರ್ನಾಟಕ ಬ್ಲಡ್ ಹೆಲ್ಪ್‌ಲೈನ್‌ನಿಂದ ಆಯೋಜನೆ

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಘಟಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಯೇನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸುಳ್ಯದ ಕನ್ನಡ ಪೆರಾಜೆ ಶಾಲಾ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು. 

ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮಿಧರಣೀದರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲಕು ಪಂಚಾಯತ್ ಸದಸ್ಯರಾದ ನಾಗೇಶ್ ಕುಂದಲ್ಪಾಡಿ ಶಿಬಿರವನ್ನು ಉದ್ಘಾಟಿಸಿದರು.ಶಿಬಿರದಲ್ಲಿ ೧೦೭ ಬಾರಿ ರಕ್ತ ದಾನ ಮಾಡಿರುವ ಸುಧಾಕರ್ ರೈ ಯವರು ರಕ್ತ ದಾನದ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಯೂಸುಫ್ ಬಯಂಬು, ಸುಳ್ಯ ತಾಲೂಕು ಅಧ್ಯಕ್ಷ ಕಲಂದರ್ ಎಲಿಮಲೆ, ಸೂರಜ್ ಹೊಸೂರು,ಜಯಲಕ್ಷ್ಮಿ, ಗ್ರಾಮಪಂಚಾಯತ್ ಸದಸ್ಯ ರಾದ ಡಿ.ಬಿ ಪ್ರಕಾಶ್, ರಹೀಂ ಫ್ಯಾನ್ಸಿ, ಪೈಝಲ್ ಮಂಚಿ, ಸತೀಶ್ ಹೊದ್ದೆಟ್ಟಿ, ನೌಪಲ್, ಪೈಸಲ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *