Header Ads
Breaking News

ಯಶಸ್ಸು ಕಂಡ ಸರ್ವಪಕ್ಷ ನಿಯೋಗದ ಸಂಸದರ ಭೇಟಿ : ಫೆ.29 ರಂದು ಟೋಲ್ ಗುತ್ತಿಗೆದಾರರ ಸಭೆ

ಮಂಜೇಶ್ವರ : ತಲಪಾಡಿ ಟೋಲ್ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಫೆಬ್ರವರಿ 29ರಂದು ಮಂಗಳೂರಿನಲ್ಲಿ ತುರ್ತು ಸಭೆ ಕರೆಯುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜೊತೆಯಾಗಿ ಅಷ್ಟರ ತನಕ ಮಂಜೇಶ್ವರ ಪರಿಸರವಾಸಿಗಳಿಗೆ ಟೋಲ್ ಗೇಟಿನಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವಂತೆ ಟೋಲ್ ಗೇಟ್ ಅಧಿಕೃತರಿಗೆ ವಿನಂತಿ ರವಾನಿಸುವುದಾಗಿಯೂ ಭರವಸೆ ನೀಡಿದರು.ಸೋಮವಾರದಂದು ಬೆಳಿಗ್ಗೆ ಮಂಜೇಶ್ವರದ ಸರ್ವಪಕ್ಷಗಳ ನಿಯೋಗ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದ ಸಂಸದರನ್ನು ಭೇಟಿ ಮಾಡಿ ತಲಪಾಡಿ ಟೋಲ್ ಗೇಟ್ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು. ಸ್ಥಳೀಯರಿಗಿದ್ದ ಟೋಲ್ ವಿನಾಯಿತಿಯನ್ನು ಮುಂದುವರಿಸಬೇಕು, ತಲಪಾಡಿ ಸಿಟಿಬಸ್ಸುಗಳನ್ನು ಟೋಲ್ ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವ ವ್ಯವಸ್ಥೆ ಕೊನೆಗೊಳ್ಳಬೇಕು ಮುಂತಾದ ಬೇಡಿಕೆಗಳನ್ನು ಸಂಸದರಿಗೆ ನೀಡಲಾಯಿತು ಕಳೆದ ಕೆಲವು ದಿನಗಳಿಂದ ಮಂಜೇಶ್ವರದ ಸ್ಥಳೀಯರಿಗೆ ಟೋಲ್ ವಿನಾಯಿತಿಯನ್ನು ರದ್ದು ಪಡಿಸಿದ ಏಕಾಏಕಿ ತೀರ್ಮನವನ್ನು ಖಂಡಿಸಿ ಸರ್ವಪಕ್ಷ ನೇತಾರರು ಟೋಲ್ ಗೇಟ್ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಜಗ್ಗದ ಅಧಿಕೃತರ ನಡವಳಿಕೆಯ ವಿರುದ್ದ ಹೋರಾಟವನ್ನು ಮುಂದುವರಿಸಿದ ನೇತಾರರು ಇಂದು ಬೆಳಿಗ್ಗೆ ಸಂಸದರನ್ನು ಬೇಟಿ ಮಾಡಿದಾಗ ಅವರು ನೀಡಿದ ಭರವಸೆಯಂತೆ ಮಂಗಳವಾರ ನಡೆಸಲು ತೀರ್ಮಾನಿಸಿದ್ದ ಟೋಲ್ ಗೇಟ್ ಮುತ್ತಿಗೆಯನ್ನು ರದ್ದುಪಡಿಸಲಾಗಿದೆ. ಕೆಲವೊಂದು ಕ್ರಿಮಿನಲ್ ಹಿನ್ನೆಲೆಯುಳ್ಳವರು ಕೂಡಾ ಸಿಬ್ಬಂಧಿಗಳ ವೇಷದಲ್ಲಿ ಟೋಲ್ ಗೇಟಿನಲ್ಲಿ ಪ್ರಯಾಣಿಕರೊಡನೆ ಗೂಂಡಾಗಿರಿ ಪ್ರದರ್ಶಿಸಿ ಅಶ್ಲೀಲ ಪದಗಳಿಂದ ನಿಂದಿಸುತ್ತಿರುವ ಬಗ್ಗೆ ಕೂಡಾ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಲಾಗುವುದಾಗಿ ನೇತಾರರು ಸುದ್ದಿಗಾರರಿಗೆ ತಿಳಿಸಿದ್ದಾರೆ. .ಸಂಸದರನ್ನು ಭೇಟಿಯಾದ ನಿಯೋಗದಲ್ಲಿ ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್, ಸದಸ್ಯ ಮುಸ್ತಫಾ ಉದ್ಯಾವರ, ರಾಜಕೀಯ ಪಕ್ಷಗಳ ಮುಖಂಡರಾದ ಹರೀಶ್ಚಂದ್ರ ಮಂಜೇಶ್ವರ, ದಯಾಕರ ಮಾಡ, ಯು.ಕೆ.ಸೈಫುಲ್ಲಾ ತಂಙಳ್, ಹನೀಫ್ ಪೆÇಸೋಟ್, ಅಬ್ದುಲ್ಲ ಗುಡ್ಡಕೇರಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *