Header Ads
Header Ads
Breaking News

ಯಾರಿಗೆ ಟಿಕೆಟ್ ಅನ್ನೋದು ಪಕ್ಷದ ವರಿಷ್ಟರು ನಿರ್ಧರಿಸ್ತಾರೆ : ಡಾ. ಜಯಮಾಲಾ ಹೇಳಿಕೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಮಂದಿ ಆಕಾಂಕ್ಷಿಗಳ ಹೆಸರನ್ನು ಸ್ವತಃ ಕಾಂಗ್ರೆಸ್ ಪಕ್ಷದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಬಹಿರಂಗಪಡಿಸಿದ್ರು. ಹೌದು, ಎಂಪಿ ಚುನಾವಣೆಗೆ ನಮ್ಮ ಪಕ್ಷದಿಂದ ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಎನ್‌ಆರ್‌ಐ ಸೆಲ್ ನ ಅಧ್ಯಕ್ಷೆ ಆರತಿ ಕೃಷ್ಣ, ಚಿಕ್ಕಮಗಳೂರು ಡಿಸಿಸಿ ಅಧ್ಯಕ್ಷ ಡಾ.ವಿಜಕುಮಾರ್ ಈ ನಾಲ್ಕು ಮಂದಿ ಆಕಾಂಕ್ಷಿಗಳು ರೇಸ್ ನಲ್ಲಿದ್ದಾರೆ. ಯಾರಿಗೆ ಟಿಕೆಟ್ ಅನ್ನೋದು ಪಕ್ಷದ ವರಿಷ್ಟರು ನಿರ್ಧರಿಸ್ತಾರೆ. ಬಿಜೆಪಿ ಪಕ್ಷದಲ್ಲಿ ನಡೆಯುತ್ತಿರೋ ಗೊಂದಲ, ಶೋಭಾ ವಿರುದ್ದ ನಡೆಯುತ್ತಿರೋ ಗೋ ಬ್ಯಾಕ್ ಅಭಿಯಾನ ಇವೆಲ್ಲ ಜಗಳದಿಂದ ನಾವು ಲಾಭಪಡೆಯಬೇಕಿಲ್ಲ. ಬಿಜೆಪಿ ಪಕ್ಷ ಮಾಡಿರೋ ತಪ್ಪೇ ಕಾಂಗ್ರೆಸ್ಸಿಗೆ ಈ ಬಾರಿಯ ಚುನಾವಣೆಯಲ್ಲಿ ಲಾಭ ತರಲಿದೆ ಎಂದರು.

Related posts

Leave a Reply

Your email address will not be published. Required fields are marked *