Breaking News

ಯಾರಿಗೆ ಯಾವ ಖಾತೆ ಕೊಡಬೇಕು ಎಂದು ಶೆಟ್ಟರ್ ಹೇಳಿಕೊಡಬೇಕಿಲ್ಲ, ವಿಪಕ್ಷಗಳ ವಿರುದ್ಧ ಹರಿಹಾಯ್ದ ಐವನ್ ಡಿಸೋಜಾ

ರಮಾನಾಥ ರೈ ಮುಖ್ಯಮಂತ್ರಿ ಸ್ಥಾನವೂ ನಿಬಾಯಿಸುವಷ್ಟು ಸಮರ್ಥರು. ಇದಕ್ಕಿಂತ ಮೊದಲು ಗೃಹ ಇಲಾಖೆ ಅನುಭವವೂ ಅವರಿಗೆ ಇದೆ. ಆದುದರಿಂದ ಯಾರಿಗೆ ಯಾವ ಖಾತೆ ಕೊಡಬೇಕು ಎಂಬುದನ್ನು ಜಗದೀಶ್ ಶೆಟ್ಟರ್ ಹೇಳಿಕೊಡಬೇಕಾಗಿಲ್ಲ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯವರಿಗೆ ಸರಕಾರದ ಸಾಧನೆಯ ವಿಷಯದಲ್ಲಿ ಟೀಕಿಸಲು ವಿಷಯ ಸಿಗುತ್ತಿಲ್ಲ ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯದಲ್ಲಿ ತಲೆ ಹಾಕುತ್ತಿದ್ದಾರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಅವರ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ಸ್ಥಾನ ನಿಬಾಯಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಸಿದ್ದರಾಮಯ್ಯ ಸರಕಾರದ ಸಾಧನೆಯಿಂದ ವಿಚಲಿತರಾಗಿರುವ ವಿಪಕ್ಷದವರು ಧ್ವಜ ಧರ್ಮದ ವಿಷಯ ಹಿಡಿದುಕೊಂಡು ಎಳೆದಾಡುತ್ತಿದ್ದಾರೆ. ಏಕ ಧ್ವಜದ ಬಗ್ಗೆ ಮಾತನಾಡುವ ಬಜೆಪಿಯವರು ರಾಷ್ಟ್ರ ಧ್ವಜದ ಬಗ್ಗೆ ತಮ್ಮ ಬದ್ಧತೆಯನ್ನು ಸ್ಷಷ್ಟಪಡಿಸಬೇಕಿದೆ ಎಂದರು.

Related posts

Leave a Reply