Header Ads
Header Ads
Breaking News

ಯಾವುದೇ ಮೂಲಭೂತ ಸೌಕರ್ಯ ಬೇಡ ಕುಡಿಯಲು ನೀರು ಕೊಡಿ:ಮಟ್ಟುಕಾರಿ ನಿವಾಸಿಗಳ ಕೂಗು

ಸರ್ಕಾರದಿಂದ ದೊರಕುವ ಯಾವುದೇ ಮೂಲಭೂತ ಸೌಕರ್ಯಗಳು ನಮಗೆ ಬೇಡ, ನಮಗೆ ಕುಡಿಯುವ ಜೀವಜಲ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂಬುದಾಗಿ ಉಡುಪಿ-ಮಂಗಳೂರು ಗಡಿಭಾಗದ ಕೊಕ್ರಾಣಿ ಮಟ್ಟಕಾರಿ ನಿವಾಸಿಗಳ ಕೂಗು. ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದಾಗ ಸಮಸ್ಯೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತೆ ವಿನಃ ಶಾಶ್ವತ ಪರಿಹಾರಕ್ಕೆ ಗ್ರಾಮ ಪಂಚಾಯಿತ್ ಮನಸ್ಸು ಮಾಡುತ್ತಿಲ್ಲ ಎಂದು ಸ್ಥಳೀಯರ ಆರೋಪ.ಈ ಬಗ್ಗೆ ಮಾತನಾಡಿದ ಇಲ್ಲಿನ ನಿವಾಸಿ ಕಿರಣ್ ವಿನಿತ್ ಪೆರ್ನಾಂಡೀಸ್, ಈ ಭಾಗದ ಕೊನೆಯಲ್ಲಿರುವ ನಮ್ಮ ಮೂರು ಮನೆಗಳಿಗೆ ಅಕ್ಟೋಬರ್ ಬಂತ್ತೆಂದರೆ ನೀರಿನ ಸಮಸ್ಯೆ ಆರಂಭಗೊಳ್ಳುತ್ತೆ, ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದಾಗ ಸಮಸ್ಯೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುತ್ತೆ ವಿನಃ ಶಾಶ್ವತ ಪರಿಹಾರಕ್ಕೆ ಗ್ರಾಮ ಪಂಚಾಯಿತ್ ಮನ ಮಾಡುತ್ತಿಲ್ಲ, ಒಮ್ಮೆ ಸಮಸ್ಯೆ ಆರಂಭಗೊಂಡರೆ ವಾರಗಟ್ಟಲೆ ನೀರಿನ ಸಮಸ್ಯೆ ಉದ್ಭವಗೊಂಡು ನಾವು ನೀರಿಗಾಗಿ ಮೈಲುದ್ದ ನಡೆದೇ ಸಾಗ ಬೇಕಾದ ಅನಿರ್ವಾಯತೆ ಇದೆ ಎಂದು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ಈ ಸಂದರ್ಭ ಸಂತ್ರಸ್ಥರಾದ ಸ್ಟಾನಿ ಫೆರ್ನಾಂಡೀಸ್, ಜೇಮ್ಸ್ ಫೆರ್ನಾಂಡೀಸ್, ಧನಂಜಯ್, ಮೇರಿ, ವೀಲ್ಫಡ್ ಮುಂತಾದವರಿದ್ದರು.

Related posts

Leave a Reply