Header Ads
Breaking News

ಯುಪಿಎ ಸರಕಾರ ಜಾರಿಗೆ ತಂದ ಭೂಸ್ವಾಧೀನ ಮಸೂದೆ ತಿದ್ದುಪಡಿ ನೀತಿ ಖಂಡಿಸಿ ಪುತ್ತೂರಿನಲ್ಲಿ ರೈತಸಂಘ, ಹಸಿರುಸೇನೆಯಿಂದ ಪ್ರತಿಭಟನೆ

ಯುಪಿಎ ಸರಕಾರ ಜಾರಿಗೆ ತಂದ ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸಿದೆ ಎಂದು ಆರೋಪಿಸಿ ರೈತಸಂಘ, ಹಸಿರುಸೇನೆ ಪ್ರತಿಭಟನೆ ನಡೆಸಿತು.

ಪುತ್ತೂರಿನ ದರ್ಭೆ ವೃತ್ತದಲ್ಲಿ ಮಾಣಿ-ಮೈಸೂರು ರಸ್ತೆಯನ್ನು 5 ನಿಮಿಷಗಳ ಕಾಲ ತಡೆಗೊಳಿಸಿ ಪ್ರತಿಭಟನೆ ನಡೆಸಿದ ರೈತಸಂಘದ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ -ಕಾಂಗ್ರೇಸ್ ಮೈತ್ರಿ ಸರಕಾರ ಭೂಸ್ವಾಧೀನ ಹಕ್ಕನ್ನು ಜಿಲ್ಲಾಧಿಕಾರಿಗಳಿಗೆ ನೀಡುವ ಮೂಲಕ ರೈತರ ಹಕ್ಕನ್ನು ಕಸಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ ರೈತ ಮುಖಂಡರು ರಾಜ್ಯ ಸರಕಾರ ಕೂಡಲೇ ಈ ತಿದ್ದುಪಡಿಯನ್ನು ರದ್ದುಗೊಳಿಸಿ ಹಿಂದೆ ಇದ್ದ ಮಸೂದೆಯನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿದ ರೈತ ಮುಖಂಡರು, ರಾಜ್ಯ ಸರಕಾರದ ಈ ರೈತ ವಿರೋಧಿ ನೀತಿಗೆ ಪ್ರತಿಪಕ್ಷ ಬಿಜೆಪಿಯೂ ಬೆಂಬಲ ನೀಡಿದೆ ಎಂದು ಆರೋಪಿಸಿದರು.

Related posts

Leave a Reply

Your email address will not be published. Required fields are marked *