
ಅದಾನಿಯವರ ಕಂಪೆನಿಯಾದ ಯುಪಿಸಿಎಲ್ ಗ್ರಿಡ್ನಿಂದ ಕೇರಳಕ್ಕೆ ಟ್ರಾನ್ಸ್ಮಿಷನ್ ಲೈನ್ ಹಾದು ಹೋಗುತ್ತಿದೆ ಈ ಬಗ್ಗೆ ರೈತರಿಗೆ ಇನ್ನೂ ಮಾಹಿತಿ ಇಲ್ಲ. ಇದರಿಂದ ರೈತರು ಭಯಭೀತರಾಗಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಯುಪಿಸಿಎಲ್ ಗ್ರಿಡ್ನಿಂದಾಗಿ ಕೃಷಿ ಮಾಡುವ ರೈತರಿಗೆ ತೊಂದರೆಯಾಗಲಿದೆ. ಈ ಗ್ರಿಡ್ ನಂದಿಕೂರಿನಿಂದಾಗಿ ಪಡುಬಿದ್ರೆ ಮೂಲಕ ಮೂಡುಬಿದರೆಗೆ ಸಂಪರ್ಕಗೊಂಡು ಬಂಟ್ವಾಳಕ್ಕೆ ಪ್ರವೇಶವಾಗಿ ಆನಂತರ ವಿಟ್ಲದ ಕರೋಪಾಡಿ ಮೂಲಕ ಕೇರಳಕ್ಕೆ ಈ ಲೈನ್ ಹಾದುಹೋಗಲಿದೆ. ಈ ಬಗ್ಗೆ ಗೂಗಲ್ ಸರ್ವೇ ಆಗಿದೆ ಎಂದು ಗೊತ್ತಾಗಿದೆ, ಇದರಿಂದ ಜನರಿಗೆ ಮತ್ತು ರೈತರಿಗೆ ತುಂಬಾ ತೊಂದರೆ ಆಗಲಿದೆ. ಇದು ಸುಮಾರು 60 ಮೀಟರ್ ಅಗಲದಲ್ಲಿ ಲೈನ್ ಹಾದು ಹೋಗಲಿದೆ ಈ ಬಗ್ಗೆ ಜನರಿಗೆ ಇನ್ನೂ ಮಾಹಿತಿ ಇಲ್ಲ. ಜನತೆಗೆ ಈ ಬಗ್ಗೆ ಸರಿಯಾದ ಚಿತ್ರಣ ಸಿಗದೆ ಇದರಿಂದ ಜನರು ಭಯಭೀತರಾಗಿದ್ದಾರೆ ಎಂದು ಹೇಳಿದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್ ಮತ್ತಿತರರು ಉಪಸ್ಥಿತರಿದ್ದರು.