Header Ads
Header Ads
Breaking News

’ಯುರೇಕ’-2019 ರಾಜ್ಯ ಮಟ್ಟದ ವಿಚಾರ ಸಂಕಿರಣ : ಕ್ಲಿನಿಕಲ್ ವೈರೋಲಜಿ ವಿಷಯದ ಕುರಿತು ಕಾರ್ಯಾಗಾರ

ಡಾ.ಎಂ.ವಿ ಶೆಟ್ಟಿ ಇನ್ಸ್ಟಿಟ್ಯೂಟ್ ಅಫ್ ಅಲೈಡ್ ಹೆಲ್ತ್ ಸೈನ್ಸ್ ವತಿಯಿಂದ ರಾಜ್ಯಮಟ್ಟದ ವಿಚಾರಗೋಷ್ಠಿ ’ಯುರೇಕ’-2019 ನ್ನು ಕ್ಲಿನಿಕಲ್ ವೈರೋಲಜಿ ವಿಷಯದ ಕುರಿತು ಡಿಸೆಂಬರ್ 3 ಮತ್ತು 5ರಂದು ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಶ್ರೀಪ್ರಿಯ ತಿಳಿಸಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ವೈರಲ್ ಅನಾರೋಗ್ಯವನ್ನು ಪತ್ತೆಹಚ್ಚುವ ಮತ್ತು ರೋಗ ನಿರ್ಣಯ ಮಾಡುವುದನ್ನು ಕ್ಲಿನಿಕಲ್ ವೈರೋಲಜಿ ಒಳಗೊಂಡಿದೆ. ವ್ಯಾಪಕವಾಗಿ ಹರಡುವ ವೈರಸ್‌ನ ಚಟುವಟಿಕೆ ಮನುಕುಲಕ್ಕೆ ಬಹುದೊಡ್ಡ ಅಪಾಯವನ್ನು ತಂದಿಟ್ಟಿದೆ. ಈ ಕುರಿತಾಗಿ ಆರೋಗ್ಯ ಸಿಬ್ಬಂದಿಗಳಿಗೆ ತಮ್ಮ ಸೇವೆಯನ್ನು ಉತ್ತಮಪಡಿಸಲು ತಿಳಿವಳಿಕೆ ಮೂಡಿಸುವುದು ಅಗತ್ಯವಾಗಿದೆ.
ಈ ಕಾರ್ಯಕ್ರಮವನ್ನು ವೈದ್ಯಕಿಯ ನಿರ್ದೇಶಕರಾದ ಡಾ. ಮುರಳಿ ಕೇಶವ ಅವರು ಉದ್ಘಾಟನೆ ಮಾಡಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದಿವ್ಯಾಂಜಲಿ ಶೆಟ್ಟಿ ಅವರು ವಹಿಸಲಿರುವರು. ಗೌರವಾನ್ವಿತ ಅತಿಥಿಗಳಾಗಿ ಡಾ. ಎಂ.ವಿ ಶೆಟ್ಟಿ ಸ್ಮಾರಕ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಸುಮ ಎಸ್ ರೈ, ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಗಣೇಶ್ ಎಚ್.ಆರ್. ಡಾ. ಸವಿತಾ ಭಟ್, ಡಾ. ಪೂಜಾ ರಾವ್ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಡಾ. ಎಂ.ವಿ ಶೆಟ್ಟಿ ಸ್ಮಾರಕ ಸಂಸ್ಥೆಯ ಶಿಕ್ಷಕ ವರ್ಗ ಶರಣ್ಯ, ಹೇಮಲತಾ ಡಾ. ನೇಹಾ ಸಮಪ್ರಿಯ ಕು. ದಿವ್ಯ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *