Header Ads
Header Ads
Header Ads
Breaking News

ಯುವಕನೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ : ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಪುತ್ತೂರು: ಯುವಕನೊಬ್ಬನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಪುತ್ತೂರು ನಗರದಲ್ಲಿ ಶುಕ್ರವಾರ ನಡೆದಿದ್ದು, ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರು ನಗರದ ಹೊರವಲಯದ ಉರ್ಲಾಂಡಿ ನಿವಾಸಿ ರಾಜೇಂದ್ರ ಹೆಗ್ಡೆ ಅವರ ಪುತ್ರ ರಕ್ಷಿತ್ ಹೆಗ್ಡೆ(29) ಹಲ್ಲೆಗೊಳಗಾದವರು. ಕಳೆದ ಶುಕ್ರವಾರ ರಾತ್ರಿ ಪುತ್ತೂರಿನ ನಿರಾಳ ಬಾರ್‌ನಲ್ಲಿ ನಡೆದ ಡಿನ್ನರ್ ಕೂಟದಲ್ಲಿ ಪಾಲ್ಗೊಂಡಿದ್ದ ತಾನು ಹಿಂತಿರುಗಿ ಬರುತ್ತಿದ್ದ ವೇಳೆ ಬಾರ್‌ನ ಎದುರು ಪರಿಚಯಸ್ಥನಾದ ಪುತ್ತೂರಿನ ನೆಹರೂನಗರದ ಇಬ್ರಾಹಿಂ ಯಾನೆ ಇಬ್ಬು ಎಂಬಾತ ತನ್ನನ್ನು ಗುರಾಯಿಸಿದ್ದ. ಈ ಬಗ್ಗೆ ತಾನು ಆತನಲ್ಲಿ ವಿಚಾರಿಸಿ ಮನೆಯ ಕಡೆಗೆ ಹೊರಟಿದ್ದೆ. ಪುತ್ತೂರು ಕಸ್ಬಾದಲ್ಲಿರುವ ಗ್ಯಾಸ್ ಪಂಪ್ ಹತ್ತಿರ ತಲುಪುತ್ತಿದ್ದಂತೆಯೇ ಇಬ್ರಾಹಿಂ, ಆತನ ಜತೆಗಿದ್ದ ಪುತ್ತೂರು ಕಲ್ಲಿಮಾರಿನ ಸುಪ್ರೀತ್ ಸೇರಿದಂತೆ ಸುಮಾರು 12ಮಂದಿಯಷ್ಟು ಸಂಖ್ಯೆಯಲ್ಲಿದ್ದ ತಂಡ ತನ್ನನ್ನು ತಡೆದು ನಿಲ್ಲಿಸಿ, ತಲುವಾರಿನಿಂದ ಕಡಿದು, ಬಿಯರ್ ಬಾಟಲಿಯಿಂದ ಹೊಡೆದು, ಗೇರ್ ವಯರಿನಿಂದ ಬಡಿದು ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರಕ್ಷಿತ್ ಹೆಗ್ಡೆ ಅವರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಇಬ್ರಾಹಿಂ ಮತ್ತು ಸುಪ್ರೀತ್ ಎಂಬವರನ್ನು ಬಂಧಿಸಿದ್ದಾರೆ.

 

Related posts

Leave a Reply

Your email address will not be published. Required fields are marked *