Header Ads
Header Ads
Header Ads
Breaking News

ಯುವಕನ ಮೇಲೆ ದಾಳಿ ಮಾಡಿದ ಸಾಕು ಮಂಗ ಬೆಳ್ತಂಗಡಿಯ ಜೋಗಿಬೆಟ್ಟು ಎಂಬಲ್ಲಿ ಘಟನೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸಿಫ್

 

ಸಾಕುಪ್ರಾಣಿಯಾಗಿ ಸಾಕಿದ ಮಂಗವೊಂದು ಯುವಕನ ಮೇಲೆ ದಾಳಿ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮಪಂಚಾಯತ್ ನ ಜೋಗಿಬೆಟ್ಟು ಎಂಬಲ್ಲಿ ನಡೆದಿದೆ. ಜೋಗಿಬೆಟ್ಟು ನಿವಾಸಿ ಮೊಹಮ್ಮದ್ ಆಸೀಫ್ ಮಂಗನ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಆಸಿಫ್ ಅವರು ಈ ಮಂಗನ್ನು ಮನೆಗೆ ತಂದು ಸಾಕುತ್ತಿದ್ದಾರೆ. ಆದರೆ ಕೆಲಸದ ನಿಮಿತ್ತ ಅವರು ಮನೆಯಿಂದ ದೂರು ಹೋಗಿದ್ದ ಸಂದರ್ಭದಲ್ಲಿ ಅವರ ಸಹೋದರ ಮಂಗನ ಆರೈಕೆ ಮಾಡುತ್ತಿದ್ದರು. ಆದರೆ ಮನೆಗೆ ಬಂದಿದ್ದ ಆಸಿಫ್ ಮಂಗನ ಜೊತೆಗೆ ಆಟವಾಡಿ, ಊಟ ನೀಡಿದ ಸಂದರ್ಭದಲ್ಲಿ ಮಂಗ ಏಕಾ‌ಏಕಿ ಆಸಿಫ್ ಕಾಲನ್ನು ಕಚ್ಚಿದೆ. ಅಲ್ಲದೆ ಕೈ ಬೆರಳುಗಳಿಗೂ ತೀವೃ ತರಹದ ಗಾಯವನ್ನು ಮಾಡಿದೆ. ಕಾಲಿಗೆ ಗಂಭೀರ ಗಾಯವಾಗಿದ್ದು, ಮಂಗನ ಹಲ್ಲುಗಳು ಆಸಿಫ್ ಕಾಲಿನ ನರಗಳಿಗೂ ಹಾನಿ ಮಾಡಿದೆ. ಇದರಿಂದಾಗಿ ಕಾಲಿನಿಂದ ತೀವೃ ರಕ್ತಸ್ರಾವವೂ ಆಗಿತ್ತು. ಸತತ ಮೂರು ಗಂಟೆಗಳ ಕಾಲ ವೈದ್ಯರು ಆಸಿಫ್ ಕಾಲಿನ ಗಾಯಗಳಿಗೆ ಹೊಲಿಗೆ ಮಾಡಿ ಸಹಜ ಸ್ಥಿತಿಗೆ ತಂದಿದ್ದಾರೆ.

ವರದಿ: ಪ್ರವೀಣ್ ಪುತ್ತೂರು

Related posts

Leave a Reply