Header Ads
Header Ads
Breaking News

ಯುವಕರಿಗೆ ಸ್ಪೂರ್ತಿ ಕೊಡುವ ಕೆಲಸ ಸಂಘಟನೆಯಿಂದ ಆಗುತ್ತಿದೆ:ಉಮಾನಾಥ ಕೋಟ್ಯಾನ್ ಅಭಿಪ್ರಾಯ

ಯುವಕರಿಗೆ ಸ್ಪೂರ್ತಿ ಕೊಡುವ ಕೆಲಸವನ್ನು ಮಾಡುತ್ತಿರುವ ಯುವವಾಹಿನಿ ಘಟಕದ ಕೆಲಸ ಅಭಿನಂದನೀಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಪೆರ್ಮುದೆಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ನಡೆದ ಯುವವಾಹಿನಿಯ ನೂತನ 33 ನೇ ಎಕ್ಕಾರು ಪೆರ್ಮುದೆ ಘಟಕದ ಉದ್ಘಟನಾ ಸಮಾರಂಭದಲ್ಲಿ ಮಾತನಾಡಿ ಹಲವು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಘಟನೆ ಹಲಾವಾರು ಸಮಾಜಮುಖಿ ಕೆಲಸಗಳನ್ನು ಮಾಡಿದೆ, ಈ ಸಂಘಟನೆ ಬೇರೆ ಸಂಘಗಳ ಜೊತೆ ಪೈಪೋಟಿಗಗಳನ್ನು ಮಾಡದೆ, ಬೇರೆ ಸಂಘಟನೆಗಳಿಗೆ ಮಾದರಿಯಾಗಬೇಕು ಸಂಘದಲ್ಲಿ ಯಾವುದೇ ರಾಜಕೀಯಕ್ಕೆ ಎಡೆಮಾಡಿಕೊಡದೆ ಘಟಕ ಬಡವರ ಪಾಲಿನ ಆಶಾಕಿರಣವಾಗಲಿ, ಅಶಕ್ತರನ್ನು ಗುರುತಿಸಿ ಅವರ ಸಮಸ್ಯೆಗೆ ಸ್ಪಂದಿಸುವಂತಾಗಲಿ ಎಂದರು, ಎಕ್ಕಾರು ಪೆರ್ಮುದೆ ಬಿಲ್ಲವ ಸಂಘದ ಗೌರಾವಾಧ್ಯಕ್ಷ ಯಾದವ ಕೋಟ್ಯಾನ್ ಕಾರ್ಯಕ್ರಮವನ್ನು ಉದ್ಘಟಿಸಿ ಮಾತನಾಡಿ ಯುವವಾಹಿನಿ ಘಟಕ ಈ ಪ್ರದೇಶಕ್ಕೆ ಅಗತ್ಯವಾಗಿತ್ತು, ಸಂಘಟನೆ ಮೂಲಕ ಸಮಾಜಮುಖಿ ಕೆಲಸಗಳು ನಿರಂತರ ನಡೆಯುವಂತಾಗಲಿ, ಇದಕ್ಕೆ ನನ್ನ ಸಹಕಾರ ನಿರಂತರ ಇದೆ ಎಂದರು. ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ್ ನಡುಬೈಲ್ ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು, ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕಾರ್ಯಕ್ರಮದಲ್ಲಿ ಸುಧಾಕರ ಪೂಜಾರಿ ಮುಕ್ಕೋಡಿ, ವಾಸ್ತು ತಜ್ಞರಾದ ಶಾಂತಪ್ಪ, ಕೇಶವ ಪೂಜಾರಿ ಕೊಂಬೋಡಿ ಎಕ್ಕಾರು ಗೋಪಾಲ ಕೋಟ್ಯಾನ್ ಎಕ್ಕಾರು, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಸುವರ್ಣ, ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷ ದೇವರಾಜ ಅಮೀನ್, ಪೆರ್ಮುದೆ ಬಿಲ್ಲವ ಸಂಘದ ಗೌರವಾಧ್ಯಕ್ಷ ಗೋಪಾಲ ಕೊಟ್ಯಾನ್ ಯುವವಾಹಿನಿ ನೂತನ ಘಟಕದ ಅಧ್ಯಕ್ಷ ಸಂದೇಶ್ ಪೂಜಾರಿ, ರಾಷ್ತ್ರೀಯ ಬಿಲ್ಲವ ಮಹಾಮಂಡಳಿಯ ದಿನೇಶ್ ಪೂಜಾರಿ ಕೇಂದ್ರ ಸಮಿತಿ ಸದಸ್ಯರು, ಬಿಲವ ಸಂಘ ಎಕ್ಕಾರು ಪೆರ್ಮುದೆ ಘಟಕದ ಸದಸ್ಯರು ಉಪಸ್ಥಿತರಿದ್ದರು. ಯುವವಾಹಿನಿ ನೂತನ ಘಟಕದ ಅಧ್ಯಕ್ಷರಾಗಿ ಸಂದೇಶ್ ಪೂಜಾರಿ ಪೆರ್ಮುದೆ, ಉಪಾಧ್ಯಕ್ಷರಾಗಿ ಚಂದ್ರಹಾಸ್ ಪೂಜಾರಿ ಎಕ್ಕಾರು, ಕಾರ್ಯದರ್ಶಿಯಾಗಿ ಸಂದೇಶ್ ಕೋಟ್ಯಾನ್ ಎಕ್ಕಾರು, ಜೊತೆ ಕಾರ್ಯದರ್ಶಿ ರೋಹಿತ್ ಎಕ್ಕಾರು, ಕೋಶಾಧಿಕಾರಿಯಾಗಿ ಜಯಲಕ್ಷೀ ಕೆ. ಪೂಜಾರಿ ಪೆರ್ಮುದೆ, ಸಂಘಟನಾ ಕಾರ್ಯದರ್ಶಿ ಶಿವರಾಮ್ ಕೋಟ್ಯಾನ್ ಪೆರ್ಮುದೆ, ವ್ಯಕ್ತಿತ್ವ ವಿಕಸನ ದೀಪಕ್ ಪೂಜಾರಿ ಪೆರ್ಮುದೆ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ದಿನೇಶ್ ಕುಕ್ಯಾನ್, , ಕ್ರೀಡೆ ಮತ್ತು ಆರೋಗ್ಯ ಸಂತೋಷ್ ಪೆರ್ಮುದೆ, ಸಮಾಜ ಸೇವೆ ತೇಜಸ್ ಪೆರ್ಮುದೆ, ಕಲೆ ಮತ್ತು ಸಾಹಿತ್ಯ ಯತೀಶ್ ಎಕ್ಕಾರು, ನಾರಾಯಣ ಗುರು ತತ್ವ ಪ್ರಚಾರ ಅನುಷ್ಟಾನ ಮೋಹನ್ ಪೂಜಾರಿ ಪೆರ್ಮುದೆ, ವಿದ್ಯಾರ್ಥಿ ಸಂಘಟನೆ ಮನೀಶ್ ಎಕ್ಕಾರು, ಮಹಿಳಾ ಸಂಘಟನೆ ಚಂದ್ರಕಲಾ ಪೆರ್ಮುದೆ, ವಿದ್ಯಾನಿಧಿ ರಂಜಿತ್ ಸಾಲಿಯಾನ್ ಪೆರ್ಮುದೆ, ಪ್ರಚಾರ ಕಿಶೋರ್ ಪೂಜಾರಿ ಎಕ್ಕಾರು ಆಯ್ಕೆಯಾಗಿದ್ದಾರೆ.

Related posts

Leave a Reply