Header Ads
Header Ads
Breaking News

ಯುವಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ : ಮಂಜೇಶ್ವರದಲ್ಲಿ ಯೂತ್ ಕಾಂಗ್ರೆಸ್‌ನಿಂದ ಪ್ರತಿಭಟನೆ

 ತಿರುವನಂತಪುರ ಸೆಕ್ರಟರಿಯೇಟ್ ಧರಣಿ ನಿರತ ಯುವಕಾಂಗ್ರೆಸ್ ಕಾರ್ಯಕರ್ತರ ಮೇಲಿನ ದೌರ್ಜನ್ಯ ಹಾಗೂ ಲೋಕಸೇವಾ ಆಯೋಗ(ಪಿಎಸ್‌ಸಿ)ದ ಅಂಕಪಟ್ಟಿಯಲ್ಲಿನ ಅವ್ಯವಹಾರ ಖಂಡಿಸಿ ಮಂಜೇಶ್ವರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಕುಂಬಳೆ ಸಿಐ ಕಛೇರಿಗೆ ಮುತ್ತಿಗೆ ಹಾಕಲಾಯಿತು.

ಕಾಸರಗೋಡು ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ಧರಣಿ ಉದ್ದೇಶಿಸಿ ಮಾತನಾಡಿದರು. ಎಡರಂಗ ಸರಕಾರದ ಪೊಲೀಸರು ಸೆಕ್ರಟರಿಯರೇಟ್‌ನಲ್ಲಿ ಧರಣಿ ನಿರತ ಯುವಕಾಂಗ್ರೆಸ್ ಕಾರ್ಯಕ್ರತರ ಮೇಲೆ ದೌರ್ಜನ್ಯವೆಸೆಗಿದ್ದು ಖಂಡನೀಯ ಎಂದು ಹೇಳಿದರು. ಕುಂಬಳೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಭಂಡಾರಿ, ದಿವಾಕರ್ ಎಸ್.ಜೆ, ರವಿ ಪೂಜಾರಿ, ಶಾನಿದ್ ಕಯ್ಯಾಂಕೂಡೇಲು, ಲಕ್ಷ್ಮಣ ಪ್ರಭು, ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *