Header Ads
Header Ads
Header Ads
Breaking News

ಯುವಜನರ ಗುರು ಮತ್ತು ಗುರಿ-ನಾರಾಯಣ ಗುರು:ಜಿಲ್ಲಾ ಮಟ್ಟದ ವಿಚಾರ ಸಂಕಿರಣ

ನಾರಾಯಣ ಗುರು ವಿಚಾರ ಕಮ್ಮಟ ಮಂಗಳೂರು ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ163 ನೇ ಜನ್ಮ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಮಂಗಳೂರಿನ ಲೈಟ್‌ಹೌಸ್‌ನಲ್ಲಿರುವ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿಚಾರ ಸಂಕಿರಣವನ್ನು ಮುಖ್ಯಮಂತ್ರಿಗಳ ಮಾದ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಆಮಿನ್ ಮಟ್ಟು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು. ಈ ದೇಶದ ಯುವಜನರ ಬದುಕು ಗೊಂದಲದ ಪರಿಸ್ಥಿತಿಯಲ್ಲಿದೆ. ಅವರ ಬದುಕಿಗೊಬ್ಬ ಗುರುವನ್ನು ಕಾಣದೆ ಅವರು ಗೊಂದಲದಲ್ಲಿದ್ದಾರೆ. ಯುವಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿರುವುದು ಹಿರಿಯರೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಎಂ. ಕೋಟ್ಯಾನ್, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಆಮಿನ್ ಸಂಕಮಾರ್, ಮಂಗಳೂರು ವಿವಿಯ ಮುದ್ದು ಮೂಡುಬೆಳ್ಳೆ, ಸುನೀಲ್‌ಕುಮಾರ್ ಬಜಾಲ್, ಯಶವಂತ ಮರೋಳಿ ಉಪಸ್ಥಿತರಿದ್ದರು.

Related posts

Leave a Reply