Header Ads
Header Ads
Breaking News

ಯುವಜನ ಸಂಘ, ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್, ಅಕ್ಷಯ, ಬೊಕ್ಕಪಟ್ಣ:’ಸ್ವರ್ಣಸುಮುಖ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ

ಮಂಗಳೂರಿನ ಬೊಕ್ಕಪಟ್ಣದ ಯುವಜನ ಸಂಘ, ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್‌ನ ಸುವರ್ಣ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ’ಸ್ವರ್ಣ ಸುಮುಖ’ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವು ಸಡಗರದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ವಿ4 ನ್ಯೂಸ್‌ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ ಅವರನ್ನು ಸನ್ಮಾನಿಸಲಾಯಿತು.ಸುವರ್ಣಮಹೋತ್ಸವದ ಸಂಭ್ರಮದಲ್ಲಿರುವ ಬೊಕ್ಕಪಟ್ಣದ ಯುವಜನ ಸಂಘ, ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್‌ನ ಸುವರ್ಣಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಸ್ವರ್ಣಸುಮುಖ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವು ಬೊಕ್ಕಪಟ್ಣದ ಅಕ್ಷಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಉದಯವಾಣಿ ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗ ಮುಖ್ಯಸ್ಥ ಮನೋಹರ್ ಪ್ರಸಾದ್ ಮತ್ತಿತರ ಗಣ್ಯರು ಸಂಘದ ಸ್ಮರಣ ಸಂಚಿಕೆ ಸ್ವರ್ಣ ಸುಮುಖ’ವನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮೊಗವೀರ ಬಂಧುಗಳು ಕರಾವಳಿಯ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಅವರು ಕರಾವಳಿಯನ್ನು ಬೆಳೆಸಿದ ರೀತಿ ಅದ್ಭುತ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ವಿ4 ನ್ಯೂಸ್‌ನ ಆಡಳಿತ ನಿರ್ದೇಶಕ ;ಲಕ್ಷ್ಮಣ್ ಕುಂದರ್ ಅವರನ್ನು ಯುವಜನ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮನೋಹರ್ ಪ್ರಸಾದ್, ಉದ್ಯಮಿ ಬದ್ರಿನಾಥ ಕಾಮತ್ ಸಹಿತ ಯುವಜನ ಸಂಘದ ಪದಾಧಿಕಾರಿಗಳು ಲಕ್ಷ್ಮಣ್ ಕುಂದರ್ ಅವರಿಗೆ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.  ಸನ್ಮಾನ ಸ್ವೀಕರಿಸಿ ಮಾತನಾಡಿದ ಲಕ್ಷ್ಮಣ್ ಕುಂದರ್ ಅವರು, ಯುವಜನ ಸಂಘದ ಜೊತೆಗಿನ ತನ್ನ ಒಡನಾಟವನ್ನು ಸ್ಮರಿಸಿಕೊಂಡರು. 
ಕಾರ್ಯಕ್ರಮದಲ್ಲಿ ಲೆಕ್ಕಪರಿಶೋಧಕ ಶ್ರೀನಿವಾಸ್ ಕಾಮತ್, ಮಹಾನಗರ ಪಾಲಿಕೆ ಸದಸ್ಯ ಲತಾ ಕಮಲಾಕ್ಷ ಸಾಲ್ಯಾನ್, ಯುವಜನ ಸಂಘದ ಅಧ್ಯಕ್ಷ ಯೋಗೀಶ್ ಆರ್. ಸಾಲ್ಯಾನ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಅಮಿತ್ ಸುವರ್ಣ, ವೀರವಿನಾಯಕ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಮತ್ತು ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ಕಿಶೋರ್ ಕುಮಾರ್ ಶೆಟ್ಟಿ, ಸುವರ್ಣಮಹೋತ್ಸಚ ಸಮಿತಿಯ ಗೌರವ ಕಾರ್ಯದರ್ಶಿ ಗಿರಿಧರ್ ಕೋಟ್ಯಾನ್, ಯುವಜನಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಶರತ್ ಸಾಲ್ಯಾನ್, ವಿ೪ ನ್ಯೂಸ್ ೨೪೭, ಮಂಗಳೂರು.

Related posts

Leave a Reply